Publish Date: Sat, 15 Aug 2020 (16:08 IST)
Updated Date: Sat, 15 Aug 2020 (16:11 IST)
ಕಾಂಗ್ರೆಸ್ ಶಾಸಕರೊಬ್ಬರ ವಿರುದ್ಧ ಸಚಿವರೊಬ್ಬರು ಟೀಕಾಸ್ತ್ರ ಮುಂದುವರಿಸಿದ್ದಾರೆ.
ಕಾಂಗ್ರೆಸ್ ನವರಿಗೆ ಹೇಳೊಕೆ ಬೇರೆ ಮಾತಿಲ್ಲ. ಕೇವಲ ನಾಟಕೀಯ ಮಾತನಾಡುತ್ತಿದ್ದಾರೆ೦ದು ಸಚಿವ ಸಿ.ಸಿ. ಪಾಟೀಲ ಖ೦ಡಿಸಿದ್ದಾರೆ.
ಇನ್ನು, ಬೆಂಗಳೂರಿನ ಗಲಭೆ ಪ್ರಕರಣದಲ್ಲಿ ಒಬ್ಬ ದಲಿತ ಶಾಸಕನಿಗೆ ರಕ್ಷಣೆ ಕೊಡಲು ಕಾ೦ಗ್ರೆಸ್ ನಿ೦ದ ಆಗ್ತಿಲ್ಲ. ಕಾಂಗ್ರೆಸ್ ಶಾಸಕನಿಗೆ ಸಾಂತ್ವನ ಹೇಳಲು ಎಷ್ಟು ಕಾಂಗ್ರೆಸ್ ನಾಯಕರು, ಎಷ್ಟು ಪ್ರಯತ್ನ ಮಾಡಿದ್ದಾರೆ? ಎ೦ದು ಪ್ರಶ್ನಿಸಿದ್ದಾರೆ.
ಪಾದರಾಯನಪುರ ಗಲಾಟೆಯಲ್ಲಿ ಜೈಲಿನಿಂದ ಹೊರ ಬಂದವರಿಗೆ ಶಾಸಕ ಜಮೀರ್ ಅಹ್ಮದ್ ಸನ್ಮಾನ ಮಾಡಿದ್ದಾರೆ. ಅವರೇನು ಸ್ವಾತಂತ್ರ್ಯ ಭಾರತಕ್ಕಾಗಿ ಹೋರಾಡಿದ್ರಾ? ಎ೦ದು ಸಚಿವ ಸಿ.ಸಿ. ಪಾಟೀಲ್ ಕಿಡಿಕಾರಿದ್ದಾರೆ.