Publish Date: Sat, 01 Aug 2020 (17:06 IST)
Updated Date: Sat, 01 Aug 2020 (17:07 IST)
ರಾಜ್ಯದ ಸಚಿವರೊಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಪತ್ನಿಯೊಂದಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಬಿ.ಸಿ.ಪಾಟೀಲ್ ವೈದ್ಯಕೀಯ ತಪಾಸಣೆ ನಡೆಸಿಕೊಂಡಿದ್ದಾರೆ.
ತಾವು ಹಾಗೂ ತಮ್ಮ ಪತ್ನಿ ಆರೋಗ್ಯವಾಗಿದ್ದು, ವೈದ್ಯರ ಸಲಹೆಗಳನ್ನು ಪಾಲನೆ ಮಾಡುತ್ತಿದ್ದೇವೆ.
ತಮಗೆ ಕೊರೊನಾ ಗುಣಲಕ್ಷಣಗಳು ಕಂಡು ಬಂದಿಲ್ಲ ಎಂದು ಹೇಳಿದ್ದಾರೆ.
ಜನರ ಆಶೀರ್ವಾದದಿಂದ ಶೀಘ್ರ ಗುಣಮುಖರಾಗಿ ಸೇವೆಗೆ ಮುಂದಾಗುವುದಾಗಿ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.