Select Your Language

Notifications

webdunia
webdunia
webdunia
webdunia

ಕೊರೊನಾ ಬೇರೆ ರೋಗಗಳಂತೆ ಪ್ರಾಣಹರಣ ಮಾಡಲ್ಲ ಎಂದ ಸಚಿವ

ಕೊರೊನಾ ಬೇರೆ ರೋಗಗಳಂತೆ ಪ್ರಾಣಹರಣ ಮಾಡಲ್ಲ ಎಂದ ಸಚಿವ
ರಾಯಚೂರು , ಶನಿವಾರ, 13 ಜೂನ್ 2020 (20:29 IST)
ಸ್ವಾಭಾವಿಕವಾಗಿ ಬರುವ ಕೆಮ್ಮು, ನೆಗಡಿ, ಜ್ವರಕ್ಕೆ ವೈದ್ಯರ ಬಳಿಗೆ ತೆರಳಲು ಹೆದರುವ ಸ್ಥಿತಿ ಕೊರೋನಾದಿಂದ ನಿರ್ಮಾಣವಾಗಿದ್ದು, ಇದು ಹೋಗಬೇಕು.

ಕೊರೊನಾ ಶೀಘ್ರವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಸಾರ್ಸ್, ಎಬೊಲಾ, ನಿಫಾದಂತೆ ಪ್ರಾಣ ಹರಣ ಮಾಡುವ ಭಯಾನಕ ರೋಗವಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ರಾಜ್ಯದಲ್ಲಿ ಒಟ್ಟಾರೆ 6516 ಕೋವಿಡ್-19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಅವರಲ್ಲಿ 3440 ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಕರ್ನಾಟಕದಲ್ಲಿ ನೋವೆಲ್ ಕೊರೋನಾ ಸೋಂಕಿನ ಚೇತರಿಕೆ ಪ್ರಮಾಣ ಶೇ. 52.8 ರಷ್ಟು ಹೆಚ್ಚಾಗಿದೆ.

ರಾಜ್ಯದಲ್ಲಿ ಇದುವರೆಗೂ ಕೋವಿಡ್-19 ನಿಂದಾಗಿ 79 ಸಾವುಗಳು ಸಂಭವಿಸಿವೆ. ಮರಣ ಪ್ರಮಾಣ ಶೇಕಡವಾರು 1.2 ರಷ್ಟು ದಾಖಲಾಗಿದೆ. ರಾಜ್ಯದಲ್ಲಿ ಕೋವಿಡ್-19 ಸೋಂಕಿನಿಂದ ಗುಣಮುಖರಾದವರ ಪ್ರಮಾಣ ಶೇ.52.8 ಆದರೆ, ರಾಷ್ಟ್ರಮಟ್ಟದಲ್ಲಿ 49.8 ರಷ್ಟು ದಾಖಲಾಗಿದೆ.

ಈ ಮೂಲಕ ಕೋವಿಡ್-19 ಸೋಂಕಿನ ವಿರುದ್ಧ ರಾಜ್ಯ ಸರ್ಕಾರ ಉತ್ತಮ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಸಕ್ರಿಯವಿರುವ 2995 ಪ್ರಕರಣಗಳ ಪೈಕಿ 2531 ರೋಗಿಗಳಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ, ಆದಕಾರಣ ಸಾರ್ವಜನಿಕರು ಕೋವಿಡ್-19ಗೆ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆ ಕಾರಣಕ್ಕೆ ಹೆಡ್ ಕಾನ್ಸಟೇಬಲ್ ಆತ್ಮಹತ್ಯೆ