Daily Horoscope

Select Your Language

Notifications

webdunia
webdunia
webdunia
webdunia

ಕೊರೊನಾ ಹರಡೋದು ಹೆಚ್ಚಾಗಿದೆ ಎಂದ ಸಚಿವ

ಕೊರೊನಾ ವೈರಸ್
ದೇಶದ 135 ಕೋಟಿ ಜನರ ಆರೋಗ್ಯದ ದೃಷ್ಠಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್ ಸಂಬಂಧಿಸಿದಂತೆ ಮೇ 3  ರವರೆಗೆ ತೆಗೆದುಕೊಂಡಿರುವ ಲಾಕ್ ಡೌನ್ ನ್ನು ಪ್ರತಿಯೊಬ್ಬರೂ ಪಾಲನೆ ಮಾಡುಬೇಕು.

ಹೀಗಂತ ಸಚಿವ ಜಗದೀಶ ಶೆಟ್ಟರ್ ಹೇಳಿದ್ದು,  ನರೇಂದ್ರ  ಮೋದಿ ಅವರು ಸೂಚಿಸಿದಂತೆ ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿಗೊಳಿಸಲಾಗುವುದು. ಇದೇ ದಿ 20 ರ ವರೆಗೆ ಕಾಯ್ದು ನೋಡಿ ಕೆಲವೊಂದಕ್ಕೆ ಸರಳೀಕರಣ ಮಾಡಲಾಗುವುದು ಎಂದರು. ಪ್ರತಿಯೊಬ್ಬ ಭಾರತೀಯನ ಹಿತದೃಷ್ಡಿಯಿಂದ ಈ ಲಾಕ್ ಡೌನ್ ಜಾರಿಯಲ್ಲಿದ್ದು, ಇದಕ್ಕೆ ಎಲ್ಲರೂ ಸಹಕರಿಸಬೇಕು.

ಎಷ್ಟೇ ಕಟ್ಟುನಿಟ್ಟಾಗಿ ರೋಗ ಹರಡದಂತೆ ಮುಂಜಾಗೃತೆ ವಹಿಸುತ್ತಿದ್ದರೂ ಅದರ ಹರಡುವಿಕೆ ಹೆಚ್ಚಾಗಿದೆ ಇದು ಕಳವಳಕಾರಿಯಾಗಿದೆ ಎಂದು ಸಚಿವ ಶೆಟ್ಟರ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲೇ ಇದ್ದ ವ್ಯಕ್ತಿಯಲ್ಲಿ ಸಿಕ್ತು ಕೊರೊನಾ ಸೋಂಕು