Publish Date: Thu, 07 Feb 2019 (15:09 IST)
Updated Date: Thu, 07 Feb 2019 (15:11 IST)
ತಾಕತ್ತಿದ್ದರೆ ರಾಜ್ಯ ಸರಕಾರದ ವಿರುದ್ಧ ಅವಿಶ್ವಾಸವನ್ನು ಮಂಡಿಸಬೇಕು. ಹೀಗಂತ ಬಿಜೆಪಿ ಮುಖಂಡರಿಗೆ ಸಚಿವರೊಬ್ಬರು ಸವಾಲು ಹಾಕಿದ್ದಾರೆ.
ಸದನದಲ್ಲಿ ಕೋಲಾಹಲ ಸೃಷ್ಟಿಸುತ್ತಿರುವ ಬಿಜೆಪಿ ಮುಖಂಡರಿಗೆ ಸಚಿವರು ಸವಾಲು ಹಾಕಿದ್ದಾರೆ. ಸದನದಲ್ಲಿ ಬಿಜೆಪಿ ಗದ್ದಲ ಎಬ್ಬಿಸುತ್ತಿರುವುದಕ್ಕೆ ಕಿಡಿಕಾರಿರುವ ಸಚಿವ ಕೃಷ್ಣಭೈರೇಗೌಡ, ನೀರಿಲ್ಲದ ಬಾವಿಯಲ್ಲಿ ಬಿದ್ದು ಒದ್ದಾಡಬೇಡಿ. ಧೈರ್ಯವಿದ್ದರೆ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಎಂದರು.
ಇದಕ್ಕೆ ಸಚಿವ ತುಕಾರಾಂ ಸೇರಿದಂತೆ ಕಾಂಗ್ರೆಸ್ ನ ಹಲವು ಶಾಸಕರು ಧ್ವನಿಗೂಡಿಸಿದರು. ತಾಕತ್ ಇದ್ದರೆ ಅವಿಶ್ವಾಸ ಮಂಡಿಸಿ ಎಂದು ಸವಾಲು ಹಾಕಿದರು.