Select Your Language

Notifications

webdunia
webdunia
webdunia
webdunia

ಸಾರ್ವಜನಿಕ ಶಿಕ್ಷಣ ಇಲಾಖೆಯ ಆದೇಶ ದ್ವಂದ್ವ

ಸಾರ್ವಜನಿಕ ಶಿಕ್ಷಣ ಇಲಾಖೆಯ ಆದೇಶ ದ್ವಂದ್ವ
bangalore , ಗುರುವಾರ, 21 ಜುಲೈ 2022 (21:09 IST)
ಸಾರ್ವಜನಿಕ ಶಿಕ್ಷಣ ಇಲಾಖೆ ದಿನಕ್ಕೊಂದು ಆದೇಶ ಹೊರಡಿಸುತ್ತಿದೆ ಎಂದು ಖಾಸಗಿ ಶಾಲಾ ಒಕ್ಕೂಟದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಕಿಡಿಕಾರಿದ್ದಾರೆ.ಶೈಕ್ಷಣಿಕ ವರ್ಷಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಲು ದಿನಾಂಕ 19/7/22ರಂದು ಸುತ್ತೋಲೆ ಹೊರಡಿಸಿ ಹೊಸ ಶಾಲೆಗಳನ್ನು ಪ್ರಾರಂಭಿಸಲು ಅಥವಾ ಸ್ವಾಭಾವಿಕ ಬೆಳವಣಿಗೆ ಅಡಿಯಲ್ಲಿ ಹೆಚ್ಚುವರಿ ವಿಭಾಗಗಳನ್ನು ಹೊಂದಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕ 25/7/22 ಕೊನೆಯ ದಿನಾಂಕ ಎಂದು ಪ್ರಕಟಿಸಿದೆ.ಇನ್ನು ಇಂದು ಮತ್ತೊಂದು  ಸುತ್ತೋಲೆಯನ್ನು ಹೊರಡಿಸಿದೆ. ಅದರಲ್ಲಿ 2022-23 ರ ಶೈಕ್ಷಣಿಕ ವರ್ಷದ ಮಾನ್ಯತೆ ನೀಡುವ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಇನ್ನು ಮಾನ್ಯತೆ ಇಲ್ಲದ ಶಾಲೆಗಳನ್ನು ಕಾನೂನು ಬಾಹಿರವಾಗಿ ನಡೆಸುತ್ತಿರುವ ಶಾಲೆಗಳೆಂದು, ಪರಿಗಣಿಸಿ ಅಂತಹ ಶಾಲೆಗಳ ಹೆಸರುಗಳನ್ನು ಬಿ ಇ ಓ ಕಚೇರಿಗಳ ನೋಟಿಸ್ ಬೋರ್ಡ್ ನಲ್ಲಿ  ಪ್ರಚಾರ ನೀಡಬೇಕೆಂದು ನಿರ್ದೇಶಸಲಾಗಿದೆ. ಇನ್ನು ಇದೆಲ್ಲ ಇಲಾಖೆಯ ದ್ವಂದ್ವ ಹಾಗೂ ಬೇಜವಾಬ್ದಾರಿ ನಿಲುವು ಎಂದು ಲೋಕೇಶ್ ತಾಳೆಕಟ್ಟೆ ಅಸಾಮಾಧಾನ ಹೊರಹಾಕ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಶಾಲೆ ಮಕ್ಕಳಿಗೆ ಈ ಸಲ ಬ್ರ್ಯಾಂಡೆಡ್ ಶೂ ಇಲ್ಲ