Publish Date: Sun, 14 Jun 2020 (19:53 IST)
Updated Date: Sun, 14 Jun 2020 (19:55 IST)
ಕೂಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರ ಅಪ್ರಾಪ್ತ ಮಗಳ ಮೇಲೆ ತೋಟದ ಮ್ಯಾನೇಜರ್ ನಿರಂತರ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದಾನೆ.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹತ್ತಿರದ ತೋಟದ ವ್ಯವಸ್ಥಾಪಕ ಮುಜಾಹಿದ್ ಅಲಿ (33) ಅತ್ಯಾಚಾರ ಆರೋಪಿಯಾಗಿದ್ದಾನೆ.
ಅಮಾಯಕಿ ಬಾಲಕಿಯ ಜೊತೆ ಕಳೆದೊಂದು ವರ್ಷದಿಂದ ದೈಹಿಕ ಸಂಬಂಧ ಬೆಳೆಸಿ ಅವಳನ್ನು ಗರ್ಭಿಣಿ ಮಾಡಿದ್ದ.
ಗರ್ಭಿಣಿಯಾಗುತ್ತಿದ್ದಂತೆ ಅವರನ್ನು ಕೆಲಸದಿಂದ ಬಿಡಿಸಿದ್ದಾನೆ. ಆಗ ತೀರ್ಥಹಳ್ಳಿ ಸಮೀಪ ತೋಟದಲ್ಲಿ ಅಪ್ಪ, ಮಗಳು ಕೆಲಸ ಮಾಡುತ್ತಿದ್ದಾಗ ಅಂಗನವಾಡಿ ಕಾರ್ಯಕರ್ತೆಗೆ ವಿಷಯ ತಿಳಿದು ಬಂದಿದೆ. ಈಗ ಪೊಲೀಸ್ ಕೇಸ್ ದಾಖಲಿಸಲಾಗಿದೆ.