Publish Date: Fri, 29 Mar 2019 (13:42 IST)
Updated Date: Fri, 29 Mar 2019 (13:43 IST)
ಲೋಕಸಭಾ ಚುನಾವಣೆಯಲ್ಲಿ ಗೆಲುವೊಂದೇ ಮಂತ್ರ ಎನ್ನುತ್ತಿರುವ ಮೈತ್ರಿ ಪಕ್ಷಗಳಿಗೆ ಸಚಿವರೇ ಈಗ ಚುನಾವಣೆಯಲ್ಲಿ ಆಸರೆಯಾಗಲಿದ್ದಾರೆ.
ಲೋಕಸಭೆ ಚುನಾವಣೆಯ ಜವಾಬ್ದಾರಿಯನ್ನು ಸಚಿವರಿಗೆ ವಹಿಸಲಾಗಿದೆ. ಕೈ ಸಚಿವರ ಸಭೆ ಕರೆದಿರುವ ವೇಣುಗೋಪಾಲ್ ನೇತೃತ್ವದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಒಂದೊಂದು ಲೋಕಸಭಾ ಕ್ಷೇತ್ರದ ಹೊಣೆ ಒಬ್ಬಬ್ಬ ಸಚಿವರಿಗೆ ವಹಿಸುವಂತೆ ಒಮ್ಮತಕ್ಕೆ ಬರಲಾಗಿದೆ.
ಸೋಲು, ಗೆಲುವಿನ ಹೊಣೆ ಆಯಾ ಸಚಿವರ ಹೆಗಲಿಗೆ ಕಟ್ಟಲಾಗುತ್ತದೆ. ಕ್ಷೇತ್ರದ ಜವಾಬ್ದಾರಿ ಹೊತ್ತ ಸಚಿವರಿಗೆ ಹೊಣೆ ಹೊರಿಸಲಾಗುತ್ತಿದೆ. ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವ ತಂತ್ರಗಾರಿಕೆ ಕೂಡ ಸಚಿವರಿಗೆ ಬಿಡಲಾಗಿದೆ. ಅವರೇ ತಂತ್ರ ರೂಪಿಸಿ ಗೆಲ್ಲಿಸಿಕೊಂಡು ಬರಬೇಕು.