Select Your Language

Notifications

webdunia
webdunia
webdunia
webdunia

ನನಗೆ ಇನ್ನು ರಾಜಕೀಯ ಬೇಡ - ತೇಜಸ್ವಿನಿ ಅನಂತ್‍ ಕುಮಾರ್

ನನಗೆ ಇನ್ನು ರಾಜಕೀಯ ಬೇಡ - ತೇಜಸ್ವಿನಿ ಅನಂತ್‍ ಕುಮಾರ್
ಬೆಂಗಳೂರು , ಶುಕ್ರವಾರ, 29 ಮಾರ್ಚ್ 2019 (10:16 IST)
ಬೆಂಗಳೂರು : ಕಳೆದ ಹಲವು ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದ ತೇಜಸ್ವಿನಿ ಅನಂತ್‍ ಕುಮಾರ್ ಈ ಬಾರಿ ತೇಜಸ್ವಿ ಸೂರ್ಯ ಪರ ಪ್ರಚಾರದಲ್ಲಿ ಭಾಗಿಯಾಗಬೇಕೆಂದರೆ ಪ್ರಧಾನಿ ಮೋದಿ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೆ ಕೆಲವು ಕಂಡಿಷನ್ ಗಳನ್ನು ಹಾಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ತೇಜಸ್ವಿನಿ ಅನಂತಕುಮಾರ್ ಅವರಿಗೆ ಬಿಜೆಪಿ ಮುಖಂಡ ಮುರಳೀಧರರಾವ್ ಮನವಿ ಮಾಡಿದರು. ಈ ವೇಳೆ ತೇಜಸ್ವಿನಿ ಅವರು, ತಮಗೆ ಬೆಂಗಳೂರು ದಕ್ಷಿಣ ಲೋಕಸಭಾ ಟಿಕೆಟ್ ತಪ್ಪಿದ್ಯಾಕೆ..? ಅಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮೊದಲು ಸ್ಪಷ್ಟಪಡಿಸಲಿ. ಅವರ ಉತ್ತರ ಒಪ್ಪಿಗೆಯಾದರೆ ಮಾತ್ರ ನಾವು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

 

ಇಲ್ಲಿ ಯಾರೂ ದೊಡ್ಡವರಲ್ಲ. ಯಾರ ಕಾಲಿಗೂ ಬೀಳುವ ಅಗತ್ಯವಿಲ್ಲ. ನನಗೆ ಇನ್ನು ರಾಜಕೀಯ ಬೇಡ. ಅದಮ್ಯ ಚೇತನದ ಸಮಾಜ ಸೇವಾ ಕಾರ್ಯಗಳನ್ನು ಮುಂದುವರಿಸುತ್ತೇವೆ ಎಂದು ತೇಜಸ್ವಿನಿ ಅನಂತ್‍ಕುಮಾರ್ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಐಟಿ ದಾಳಿಗೆ ಅಸಲಿ ಕಾರಣ ಬಿಚ್ಚಿಟ್ಟ ದೇವೇಗೌಡ್ರು