Publish Date: Mon, 18 Feb 2019 (15:18 IST)
Updated Date: Mon, 18 Feb 2019 (15:20 IST)
ವರುಣ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ.
ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯರಿಂದ ಆಯೋಜನೆ ಮಾಡಲಾಗಿದೆ. ಅಕ್ಷರ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ಇದನ್ನು ಆಯೋಜನೆ ಮಾಡಲಾಗಿದೆ.
ಫೆ.23 ರಂದು ಉದ್ಯೋಗ ಮೇಳ ನಡೆಯಲಿದೆ. ತಾಂಡವಪುರದ ಅಗ್ನಿ ನೇತ್ರಾಂಬಿಕ ದೇವಸ್ಥಾನದ ಆವರಣದಲ್ಲಿ ಮೇಳ ನಡೆಸಲಾಗುತ್ತಿದೆ.
ವರುಣಾ ಭಾಗದಲ್ಲಿ ನಿರುದ್ಯೋಗ ನಿವಾರಣೆಗಾಗಿ ಉದ್ಯೋಗ ಮೇಳೆ ಆಯೋಜನೆ ಮಾಡಲಾಗಿದೆ. ನಾನು ಬಂದಾಗ ನಿರುದ್ಯೋಗದ ಸಮಸ್ಯೆ ಕಂಡು ಕೊಂಡೆ. ಸುಮಾರು ನೂರು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಲಿವೆ. ಸುಮಾರು 5 ಸಾವಿರ ಯುವಕ ಯುವತಿಯರಿಗೆ ಸ್ಥಳದಲ್ಲೆ ಉದ್ಯೋಗ ಸಿಗಲಿದೆ. ಯುವಕ ಯುವತಿಯರು ಬಂದು ಇದರ ಸದುಪಯೋಗ ಪಡೆದುಕೊಳ್ಳಿ. ಜಿಲ್ಲೆಯ ಹಲವು ಕಡೆ ಉದ್ಯೋಗ ಮೇಳಗಳು ನಡೆದಿದೆ.
ನಡೆದಿರುವ ಉದ್ಯೋಗ ಮೇಳಗಳು ಯಶಸ್ವಿಯಾಗಿವೆ ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.