Select Your Language

Notifications

webdunia
webdunia
webdunia
webdunia

ದೇಶದ್ರೋಹ ಹೇಳಿಕೆ ನೀಡಿದವರ ನಾಲಿಗೆ ಕತ್ತರಿಸಬೇಕಾಗುತ್ತದೆ- ಶಾಸಕ ರಾಜುಗೌಡ ಎಚ್ಚರಿಕೆ

ದೇಶದ್ರೋಹ ಹೇಳಿಕೆ ನೀಡಿದವರ ನಾಲಿಗೆ ಕತ್ತರಿಸಬೇಕಾಗುತ್ತದೆ- ಶಾಸಕ ರಾಜುಗೌಡ ಎಚ್ಚರಿಕೆ
ರಾಯಚೂರು , ಭಾನುವಾರ, 17 ಫೆಬ್ರವರಿ 2019 (14:15 IST)
ರಾಯಚೂರು : ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ  ದೇ‍ಶದ್ರೋಹಿಗಳು  ಸಂತಸ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಬುದ್ಧಿಜೀವಿಗಳು ಹೇಳಿಕೆ ನೀಡುವಾಗ ಅವರ ನಾಲಗೆ ಮೇಲೆ ಹಿಡಿತವಿರಿಲಿ. ಇಲ್ಲದಿದ್ದರೆ ನಾಲಿಗೆ ಕತ್ತರಿಸಬೇಕಾಗುತ್ತದೆ ಎಂದು ಸುರಪುರ ಶಾಸಕ ರಾಜುಗೌಡ ಎಚ್ಚರಿಕೆ ನೀಡಿದ್ದಾರೆ.


ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಾವಿಗೆ ಸಂತಾಪ ಸೂಚಿಸಿ, ಬಳಿಕ ಮಾತನಾಡಿದ ಅವರು, ಪುಲ್ವಾಮದಲ್ಲಿ ನಡೆದ ಘೋರ ಉಗ್ರರ ದಾಳಿಯಲ್ಲಿ ವೀರ ಯೋಧರು ಹುತಾತ್ಮರಾಗಿರುವುದು ಬೇಸರದ ಸಂಗತಿ. ಇದರಿಂದ ಇಡೀ ದೇಶಕ್ಕೆ ನೋವಾಗಿದೆ. ಯೋಧರ ಹತ್ಯೆಯನ್ನು ಸಂಭ್ರಮಿಸುವ ಪ್ರಜೆಗಳು, ನಟರು, ರಾಜಕಾರಣಿಗಳು ಹಾಗೂ ಉದ್ಯಮಿಗಳು ಯಾರೇ ಆಗಲಿ ಅವರು ದೇಶದ್ರೋಹಿಗಳು. ಯಾರೇ ದೇಶದ್ರೋಹ ಹೇಳಿಕೆ ನೀಡಿದರೂ ಅವರ ಪ್ರತಿರೋಧಕ್ಕೆ ಯುವಕರ ಪಡೆ ಸಿದ್ಧವಾಗಿದೆ  ಎಂದು ಕಿಡಿಕಾರಿದ್ದಾರೆ.


ಅಲ್ಲದೇ ಸಿಆರ್‌ಪಿಎಫ್‌ನ 40 ಕ್ಕೂ ಅಧಿಕ ಯೋಧರು ಬಲಿಯಾಗಿದ್ದಾರೆ. ಈ ಕೃತ್ಯವೆಸಗಿದ ಪಾಕ್ ಉಗ್ರರನ್ನು ಬುಡ ಸಮೇತ ಕಿತ್ತು ಎಸೆಯಬೇಕು ಎಂದು ನಾನು ಮೋದಿ ಅವರಿಗೆ ಮನವಿ ಮಾಡುತ್ತೇನೆ. ಗಡಿ ಯೋಧರು ಯಾವ ಜಾತಿ, ಪಕ್ಷ ಭೇದವಿಲ್ಲದೆ ನಾವೆಲ್ಲ ಭಾರತೀಯರೆಂದು ದೇಶವನ್ನು ಕಾಯುತ್ತಾರೆ. ಹಾಗೆಯೇ ನಾವೆಲ್ಲ ಒಂದಾಗಿ ಉಗ್ರರ ವಿರುದ್ಧ ನಿಲ್ಲಬೇಕು ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪುಲ್ವಾಮಾ ದಾಳಿಗೆ ಯೋಧರೇ ಕಾರಣ ಎಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕಿ