Select Your Language

Notifications

webdunia
webdunia
webdunia
webdunia

ಉಗ್ರರ ದಾಳಿಗೆ 42 ಸಿ.ಆರ್.ಪಿ.ಎಫ್.ಯೋಧರು ಬಲಿ; ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದ ಉಗ್ರರ ಬೆಂಬಲಿಗರು

ಉಗ್ರರ ದಾಳಿಗೆ 42 ಸಿ.ಆರ್.ಪಿ.ಎಫ್.ಯೋಧರು ಬಲಿ; ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದ ಉಗ್ರರ ಬೆಂಬಲಿಗರು
ಶ್ರೀನಗರ , ಶುಕ್ರವಾರ, 15 ಫೆಬ್ರವರಿ 2019 (09:45 IST)
ಶ್ರೀನಗರ : ಅವಂತಿಪುರ್ -ಪುಲ್ವಾನ ಮಾರ್ಗ ಮಧ್ಯದಲ್ಲಿ ಸಾಗುತ್ತಿದ್ದ ಸಿ.ಆರ್.ಪಿ.ಎಫ್. ಯೋಧರಿದ್ದ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಘಟನೆಯಲ್ಲಿ 42 ಮಂದಿ ಯೋಧರು ಹುತಾತ್ಮರಾಗಿದ್ದಾರೆ.


ಇನ್ನೂ ಅನೇಕ ಮಂದಿ ಯೋಧರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು ಕೆಚ್ಚೆದೆಯ ಭಾರತೀಯ ಯೋಧರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಪುಲ್ವಾಮದಲ್ಲಿ ಸಿ.ಆರ್.ಪಿ.ಎಫ್  ಸಿಬ್ಬಂದಿ ಮೇಲೆ ದಾಳಿ ನಡೆಸಿರುವುದು ತೀವ್ರವಾಗಿ ಖಂಡಿಸುತ್ತೇನೆ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಹುತಾತ್ಮ ಯೋಧರ ಕುಟುಂಬದ ಜೊತೆಗೆ ಈಡಿ ದೇಶವೇ ನಿಂತಿದೆ. ಗಾಯಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ತಿಳಿಸಿದ್ದಾರೆ.


ಆದರೆ ಈ ಘಟನೆಗೆ ಸಂಬಂಧಿಸಿದಂತೆ ಇಡೀ ದೇಶವೇ ಕಂಬನಿ ಮಿಡಿಯುತ್ತಿರುವಾಗ ಉಗ್ರರ ಬೆಂಬಲಿಗರು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ.  ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸಹಿತ ಉಗ್ರಬೆಂಬಲಿಗ ರಾಷ್ಟ್ರಗಳ ಮಂದಿ, ಭಾರತಕ್ಕೆ ತಕ್ಕ ಶಾಸ್ತಿಯಾಗಿದೆ, ಹ್ಯಾಪಿ ವ್ಯಾಲೆಂಟೈನ್ಸ್ ಡೇ, ಈಗ ಸಾವಿನ ಸಂಖ್ಯೆ 42 ಆಗಿದೆ, ಇನ್ನೂ ಮುಂದುವರಿಯಲಿದೆ. ಕಾಶ್ಮೀರಕ್ಕೆ ಇಂದು ಸಂಭ್ರಮದ ದಿನ ಎಂದೆಲ್ಲಾ ಕಮೆಂಟ್ ಮಾಡಿ ಪೋಸ್ಟ್ ಮಾಡಿದ್ದಾರೆ. ಪಾಪಿಗಳ ಈ ಕೃತ್ಯವನ್ನು ಕಂಡು ದೇಶದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೊಸೆಯನ್ನು ಮದುವೆಯಾಗುವ ಆಸೆಯಿಂದ ತಂದೆ ಮಗನಿಗೆ ಮಾಡಿದ್ದೇನು ಗೊತ್ತಾ?