Select Your Language

Notifications

webdunia
webdunia
webdunia
webdunia

ಕೃಷ್ಣಾ, ದೂಧಗಂಗಾ ನದಿ ನೀರಿನಿಂದ ಸೇತುವೆಗಳೇ ಜಲಾವೃತ

ಕೃಷ್ಣಾ, ದೂಧಗಂಗಾ ನದಿ ನೀರಿನಿಂದ ಸೇತುವೆಗಳೇ ಜಲಾವೃತ
ಬೆಳಗಾವಿ , ಭಾನುವಾರ, 7 ಜುಲೈ 2019 (15:52 IST)
ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಮತ್ತೆ ಏರಿಕೆ ಕಂಡು ಬಂದಿದ್ದರಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನದಿ ಪಾತ್ರದ ಜನರ ಕಷ್ಟ ಆ ದೇವರೇ ಬಲ್ಲ. ಇನ್ನು ವಾಹನ ಸವಾರರ ಪಾಡು ಕೇಳೋರೆ ಇಲ್ಲ.

ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳ ಒಳ ಹರಿವು ಹೆಚ್ಚಳಗೊಂಡಿದೆ. ಇದರ ಪರಿಣಾಮ ಮತ್ತೆ ಮುಳುಗಡೆಗೊಂಡಿವೆ 3 ಕೆಳ ಹಂತದ ಸೇತುವೆಗಳು.

ಬೋಜ- ಕಾರದಗಾ, ಭೋಜವಾಡಿ- ಕಣ್ಣೂರ- ಮಲಿಕವಾಡ, ದತವಾಡ ಸೇತುವೆ ಜಲಾವೃತಗೊಂಡಿವೆ.

ಬೆಳವಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸೇತುವೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
3 ಸೇತುವೆಗಳೂ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಳ ಹಂತದ ಬ್ರಿಡ್ಜ್ ಕಮ್ ಬಂದಾರಗಳಾಗಿವೆ.

ಸೇತುವೆಗಳು ಬಂದ್ ಆಗಿದ್ದರಿಂದ ವಾಹನ ಸವಾರರ ಪರದಾಟ ಹೆಚ್ಚಾಗಿದೆ. ಕೃಷ್ಣಾ ನದಿಗೆ ಸುಮಾರು 22,000 ಸಾವಿರ ಕ್ಯುಸೆಕ್ ನೀರು ಹರಿದು ಬರ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಅವರ ಬದುಕು ಬೀದಿಗೆ ಬಿದ್ದದ್ದು ಏಕೆ?