Select Your Language

Notifications

webdunia
webdunia
webdunia
webdunia

ದಿ ಕಾಶ್ಮೀರಿ ಫೈಲ್ಸ್ " ಕನ್ನಡದಲ್ಲಿ ಡಬ್

ದಿ ಕಾಶ್ಮೀರಿ ಫೈಲ್ಸ್
ಬೆಂಗಳೂರು , ಶನಿವಾರ, 19 ಮಾರ್ಚ್ 2022 (15:42 IST)
ಬಹುಚರ್ಚಿತ, ಯಶಸ್ವಿ ಬಾಲಿವುಡ್ ಚಿತ್ರ ”ದಿ ಕಾಶ್ಮೀರ್ ಫೈಲ್ಸ್” ಕನ್ನಡಕ್ಕೆ ಡಬ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಇದಕ್ಕೆ ರಾಜ್ಯ ಬಿಜೆಪಿಯೂ ಎಲ್ಲಾ ರೀತಿಯಲ್ಲೂ ಸಿದ್ಧತೆಗಳನ್ನು ನಡೆಸಿಕೊಂಡಿದೆ.
 
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡಬೇಕಾಗಿದೆ, ಕನ್ನಡಕ್ಕೆ ಬಂದರೆ ಉತ್ತಮ ಎಂದು ಈಗಾಗಲೇ ಹೇಳಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡಬೇಕಾಗಿದೆ, ಕನ್ನಡಕ್ಕೆ ಬಂದರೆ ಉತ್ತಮ ಎಂದು ಈಗಾಗಲೇ ಹೇಳಿದ್ದಾರೆ.
 
ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಯನ್ನು ಈ ಹಿಂದೆಯೇ ತೆಗೆದು ಹಾಕಬೇಕಾಗಿತ್ತು. ಕಾಂಗ್ರೆಸ್ ಪಕ್ಷ ಈ ಬಗ್ಗೆ ಯಾಕೆ ಯೋಚನೆ ಮಾಡಲಿಲ್ಲ. ಆ ಕೆಲಸವನ್ನು ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಮಾಡಿದರು. ಕಾಂಗ್ರೆಸ್ ಈ ವಿಚಾರದಲ್ಲಿ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದರು.
 
ಇನ್ನೊಂದೆಡೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು, ಚಿತ್ರ ಕನ್ನಡಕ್ಕೆ ಡಬ್ ಆಗಲೇ ಬೇಕಾಗಿದೆ. ನಾನು ಈಗಾಗಲೇ ಚಿತ್ರದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದು, ಅವರು ಒಪ್ಪಿಗೆ ನೀಡಿದರೆ ನಾವು ಹಣ ಒಟ್ಟುಗೂಡಿಸಿ ಚಿತ್ರವನ್ನು ಡಬ್ ಮಾಡುತ್ತೇವೆ. ಕನ್ನಡಕ್ಕೆ ಬಂದರೆ ಜನರಿಗೆ ಕಾಶ್ಮೀರದಲ್ಲಿ ನಡೆದ ಘಟನೆ ಸ್ಪಷ್ಟವಾಗಿ ಅರ್ಥ ವಾಗುತ್ತದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರು ಸೆಕ್ಸ್ ಮಾತ್ರವಲ್ಲ- ಡೆತ್ ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ