Publish Date: Thu, 28 Feb 2019 (21:24 IST)
Updated Date: Thu, 28 Feb 2019 (21:25 IST)
ಲೋಕಸಭೆ ಚುನಾವಣೆಯ ಕಾವು ರಂಗೇರುತ್ತಿರುವಂತೆ ಸಿಎಂ ಮತ್ತಷ್ಟು ಕಾವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ.
ಕನ್ನಡಿಗರು ಪ್ರಧಾನಿಯಾಗುತ್ತಾರೆ ಎಂದು ಸಿಎಂ ಪುನರುಚ್ಛಾರ ಮಾಡಿದ್ದಾರೆ. ಈ ಬಾರಿ ಕನ್ನಡಿಗರು ಪ್ರಧಾನಿ ಆಗುತ್ತಾರೆ ಪುನರುಚ್ಛಾರವನ್ನು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾಡಿದ್ದಾರೆ.
ಕನ್ನಡಿಗರು ಯಾಕೆ ಪ್ರಧಾನಿಯಾಗಬಾರದು? ಚುನಾವಣೆ ಬಳಿಕ ಎಲ್ಲವೂ ಗೊತ್ತಾಗಲಿದೆ, ಡೋಂಟ್ ವರಿ ಎಂದು ತಮ್ಮದೇ ಸ್ಟೈಲ್ ನಲ್ಲಿ ಹೇಳಿದರು.
ಶಿವರಾತ್ರಿ ವೇಳೆಗೆ ಜೆಡಿಎಸ್ ಪಾಲಿನ ಸಂಪುಟ ವಿಸ್ತರಣೆ ಆಗಲಿದೆ ಎಂಬುದರ ಕುರಿತು ಮಾತನಾಡಿದ ಅವರು, ಸದ್ಯಕ್ಕೆ ಸಂಪುಟ ವಿಸ್ತರಣೆ ಮಾಡುವುದಿಲ್ಲ. ಸೂಕ್ತ ಸಂದರ್ಭದಲ್ಲಿ ವಿಸ್ತರಣೆ ಮಾಡುತ್ತೇವೆ ಎಂದಷ್ಟೇ ತಿಳಿಸಿದರು.