Publish Date: Fri, 23 Feb 2018 (06:39 IST)
Updated Date: Fri, 23 Feb 2018 (06:43 IST)
ಚಿಕ್ಕಬಳ್ಳಾಪುರ : ಕ್ಷುಲಕ ಕಾರಣಕ್ಕೆ ಜೆ.ಡಿ.ಎಸ್. ಕಾರ್ಯಕರ್ತನೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಕೈ ಕತ್ತರಿಸಿ ಹಲ್ಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಅರ್ಕುಂದ ಗ್ರಾಮದಲ್ಲಿ ನಡೆದಿದೆ.
ಜೆ.ಡಿ.ಎಸ್. ಕಾರ್ಯಕರ್ತ ಲೋಕೇಶ್ ಎಂಬುವವರು ಈ ಕೃತ್ಯವೆಸಗಿದ ಆರೋಪಿಯಾಗಿದ್ದು, ಕಾಂಗ್ರೆಸ್ ಕಾರ್ಯಕರ್ತ ರವಿಕುಮಾರ್ ಅವರು ಈತನಿಂದ ಹಲ್ಲೆಗೊಳಗಾದ ವ್ಯಕ್ತಿ. ಶಾಸಕ ಸುಧಾಕರ್ ಅವರ ಕಡೆಯಿಂದ ರವಿಕುಮಾರ್ ಸೀರೆ ಹಂಚುತ್ತಿದ್ದ ಸಂದರ್ಭದಲ್ಲಿ ಅವರಿಬ್ಬರ ನಡುವೆ ಜಗಳ ಶುರುವಾಗಿ ಕೊನೆಗೆ ಅದು ವಿಕೋಪಕ್ಕೆ ಹೋಗಿದ್ದರಿಂದ ಆವೇಶಗೊಂಡ ಲೋಕೇಶ್ ಮಾರಕಾಸ್ತ್ರದಿಂದ ರವಿಕುಮಾರ್ ಕೈ ಕತ್ತರಿಸಿದ್ದಾರೆ. ಕೈ ಕಟ್ ಆಗಿ ನರಳುತ್ತಿದ್ದ ರವಿಕುಮಾರ್ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ