Select Your Language

Notifications

webdunia
webdunia
webdunia
webdunia

ಮೂರೂ ಪಕ್ಷಗಳಿಂದ ರಾಜ್ಯ ಲೂಟಿ– ಎಸ್.ಆರ್.ಹಿರೇಮಠ

ಮೂರೂ ಪಕ್ಷಗಳಿಂದ ರಾಜ್ಯ ಲೂಟಿ– ಎಸ್.ಆರ್.ಹಿರೇಮಠ
ಹಾವೇರಿ , ಗುರುವಾರ, 22 ಫೆಬ್ರವರಿ 2018 (20:41 IST)
ರಾಜ್ಯದಲ್ಲಿನ ಜೆಸಿಬಿ ಪಕ್ಷಗಳು ಲೂಟಿಕೋರ ಪಕ್ಷಗಳಾಗಿದ್ದು, ರಾಜ್ಯವನ್ನು ಲೂಟಿ ಹೊಡೆದಿವೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿಯವರು ಭ್ರಷ್ಟಚಾರ ಮೈಗೂಡಿಸಿಕೊಂಡು ಸ್ವತಂತ್ರ ಭಾರತದ ಕನಸನ್ನು ಹಾಳು ಮಾಡಿದ್ದಾರೆ ಎಂದು ದೂರಿದ್ದಾರೆ.

ಜೆಡಿಎಸ್ ಪಕ್ಷ ರಾಜ್ಯಸಭೆ ಸ್ಥಾನಗಳನ್ನು ಹರಾಜಿಗಿಟ್ಟು ರಾಜ್ಯವನ್ನು ಹಾಳು ಮಾಡಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಸೋತಿದ್ದಾರೆ ಎಂದು ಟೀಕಿಸಿದ್ದಾರೆ.

ಬ್ಯಾಂಕುಗಳು ದಿವಾಳಿಯಾದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ. ನರೇಂದ್ರ ಮೋದಿ, ಅರುಣ್ ಜೇಟ್ಲಿ, ಅಮಿತ್ ಶಾ ಅವರಿಂದ ದೇಶ ವಿನಾಶದತ್ತ ಸಾಗಿದೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೃತಜ್ಞತೆ ಇಲ್ಲದವರು ನಾಯಕರಲ್ಲ– ಸಿಎಂ ವಿರುದ್ಧ ಎಚ್.ವಿಶ್ವನಾಥ್ ಕಿಡಿ