Select Your Language

Notifications

webdunia
webdunia
webdunia
webdunia

ಪಿಸ್ತೂಲ್ ಪ್ರಕರಣದ ತನಿಖೆ ಚುರುಕು

The investigation in the pistol case is brisk
bangalore , ಶುಕ್ರವಾರ, 9 ಜೂನ್ 2023 (19:45 IST)
ಕಬ್ಬನ್ ಪಾರ್ಕ್ ಪೊಲೀಸರಿಂದ ಮೂರು ಪಿಸ್ತೂಲ್ ಮತ್ತು 99 ಜೀವಂತ ಗುಂಡು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್​ ಪೊಲೀಸರಿಂದ ತನಿಖೆ ಮುಂದುವರಿದಿದೆ. ಪಿಸ್ತೂಲ್ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ಧಾರೆ. ಎರಡು ಆಯಾಮದಲ್ಲಿ ಪ್ರಕರಣದ ತನಿಖೆ ಆರಂಭವಾಗಿದೆ. ಮಾಹಿತಿ ಪ್ರಕಾರ ನಾಗಲ್ಯಾಂಡ್​ನಿಂದ ಪಿಸ್ತೂಲ್ ತರಿಸಲಾಗಿತ್ತು. ಆರೋಪಿ ನೀರಜ್ ಜೋಸೆಫ್ ಪಿಸ್ತೂಲ್ ತೆಗೆದುಕೊಂಡು ಬಂದಿದ್ದ. ಬರ್ಮ ನಾಗಾಲ್ಯಾಂಡ್ ಮೂಲಕ ಕರ್ನಾಟಕಕ್ಕೆ ಪಿಸ್ತೂಲ್ ತರಲಾಗಿತ್ತು. ಇದು ಎಲ್ಲಿ ತಯಾರಾಗಿತ್ತು. ಎಷ್ಟು ಪಿಸ್ತೂಲ್ ಮತ್ತು ಗುಂಡುಗಳಿಗೆ ಮತ್ತೆ ಬೇಡಿಕೆ ಇಡಲಾಗಿದೆ ಎಂದು ತನಿಖೆ ಮಾಡಲಾಗುತ್ತಿದೆ. ನಾಗಾಲ್ಯಾಂಡ್ ಕೊಂಚ ನಕ್ಸಲ್ ಚಟುವಟಿಕೆ ಇರುವ ಪ್ರದೇಶವಾಗಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವರದಿ ಪರಿಶೀಲಿಸಿ ಕ್ರಮ ಕೈಗೊಳ್ತೀವಿ