Select Your Language

Notifications

webdunia
webdunia
webdunia
webdunia

ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಬಿ.ವೈ ಬ್ರದರ್ಸ್

B.Y Brothers inquired about the welfare of the injured
ಶಿವಮೊಗ್ಗ , ಶುಕ್ರವಾರ, 9 ಜೂನ್ 2023 (18:35 IST)
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಜಕ್ಕನಹಳ್ಳಿ ಬಳಿ ಅಪಘಾತವಾಗಿ 12 ಮಂದಿ ಗಾಯಗೊಂಡಿದ್ದರು. ಈ ಹಿನ್ನೆಲೆ ಆಸ್ಪತ್ರೆಗೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ಭೇಟಿ ನೀಡಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಲಗೇಜು ಆಟೋಗೆ ಬೊಲೆರೋ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಸರಕು ಸಾಗಾಟ ವಾಹನದಲ್ಲಿ ಕುಳಿತ್ತಿದ್ದವರು ಗಾಯಗೊಂಡಿದ್ದರು. ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳು ದಾಖಲಾಗಿದ್ದರು. ಗಾಯಾಳುಗಳಿಗೆ ಬಿ.ವೈ ಬ್ರದರ್ಸ್ ಸಾಂತ್ವನ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮಗಳ ವಿರುದ್ಧ ತನಿಖೆ ನಡೆಸಲಾಗುವುದು