Publish Date: Wed, 08 Nov 2023 (21:00 IST)
Updated Date: Wed, 08 Nov 2023 (20:40 IST)
ಶಾಪಿಂಗ್ ಗೆ ಹೆಸರಾಗಿದ್ದ ಏರಿಯಾ ಈಗ ಖಾಲಿ..ಖಾಲಿಯಾಗಿದೆ.ಅಲ್ಲಲ್ಲಿ ಒಂದೊಂದು ಅಂಗಡಿ ಬಿಟ್ರೆ ಬೇರೆ ಯಾವ ಅಂಗಡಿಗಳು ಇಲ್ಲ.ಇಡೀ ಮಲೇಶ್ವರಂ 8 ಮತ್ತು 10ನೇ ಕ್ರಾಸ್ ನಲ್ಲಿ ಈಗ ನಿರಾವ ಮೌನ ಆವರಿಸಿದೆ.ಜನ ಜಾತ್ರೆಯಿಂದ ಇರುತ್ತಿದ್ದ ಏರಿಯಾ ಈಗ ಖಾಲಿಯಾಗಿದೆ.
ಬಿಬಿಎಂಪಿ ಅಧಿಕಾರಿಗಳ ದಿಢೀರ್ ತೆರವು ಕಾರ್ಯಚರಣೆ ಹಿನ್ನೆಲೆ ಇಡೀ ಮಲೇಶ್ವರಂ ಖಾಲಿಯಾಗಿದೆ.ಪಾದಚಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಸುಗಮ ದಾರಿಗಾಗಿ ಈ ನಿರ್ಧಾರ ಮಾಡಿದ್ದು,4 ಟ್ರಾಕ್ಟರ್ 20 ಕ್ಕೂ ಅಧಿಕ ಸಿಬ್ಬಂದಿಯಿಂದ ತೆರವು ಕಾರ್ಯ ನಡೆದಿತ್ತು.ಈ ಬಗ್ಗೆ ಮಲೇಶ್ವರಂ ನಿವಾಸಿಗಳು ಖುಷಿಯಾಗಿದ್ದಾರೆ.ವಯಸ್ಸಾದವರಿಗೆ ..ಮಕ್ಕಳಿಗೆ ಓಡಾಡಲು ಜಾಗವೇ ಇರುತ್ತಿರಲಿಲ್ಲ ಆದ್ರೆ ಈಗ ಅದಕ್ಕೆ ಮುಕ್ತಿ ಸಿಕ್ಕಿದೆ ಎಂದು ಸ್ಥಳೀಯರಲ್ಲಿ ಖುಷಿ ಮೂಡಿದೆ.ಇದೇ ರೀತಿ ಇದ್ರೆ ನಮಗೆ ತುಂಬಾ ಅನುಕೂಲ.. ಬೇರೆ ಕಡೆಯಿಂದ ಬಂದು ಇವರು ನಮ್ಮ ಮೇಲೆಯೇ ದಬ್ಬಾಳಿಕೆ ಮಾಡ್ತಾರೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.