Select Your Language

Notifications

webdunia
webdunia
webdunia
webdunia

ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷಗಳ ಚೇರ್ ಖಾಲಿ ಖಾಲಿ

ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷಗಳ ಚೇರ್ ಖಾಲಿ ಖಾಲಿ
bangalore , ಗುರುವಾರ, 20 ಜುಲೈ 2023 (19:29 IST)
ಸದನದಲ್ಲಿ‌ ಸದ್ದು ಮಾಡಿದ್ದ ಐಎಎಸ್ ಅಧಿಕಾರಿಗಳನ್ನ ದುರುಪಯೋಗ ಮಾಡಿಕೊಂಡಿದೆ ಸರ್ಕಾರ ಎಂದು ಬಿಜೆಪಿ,ಜೆಡಿಎಸ್ ನಾಯಕರು ಆರೋಪ ಮಾಡಿದ್ರು.ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದ ಆಡಳಿತ ರೋಡ ಪಕ್ಷ ಕಾಂಗ್ರೆಸ್ ಇದು ಹಿಂದೆಯು ನಡೆದಿದೆ.ಕುಮಾರಸ್ವಾಮಿ ಅವರು ಈ ರೀತಿ ಐಎಎಸ್ ಅಧಿಕಾರಿಗಳನ್ನ ನೇಮಕ ಮಾಡಿದ್ರು.ಯಾವುದೇ ಪ್ರೊಟೊ ಕಾಲ್ ಉಲ್ಲಂಘನೆ ಆಗಿಲ್ಲ ಎಂದು ಉತ್ತರ ನೀಡಿದ್ರು.ಈದಕ್ಕೆ ಅಸಮಧಾನಗೊಂಡ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾದರು.ಈ ವೇಳೆ ಸರ್ಕಾರ ನಡುವೆ ವಿರೋಧ ಪಕ್ಷದ ನಡುವೆ ವಾಕ್ ಸಮರ ಉಂಟಾಯಿತು.ಬಿಜೆಪಿ ಶಾಸಕರು ಪ್ರತಿಭಟನೆ ಮಾತ್ರಾ ಕೈಬಿಡಲಿಲ್ಲ ಪ್ರತಿಭಟನೆ ನಡೆವೆಯೇ ಭೋಜನ ವಿರಾಮ ನೀಡದೆ ಕಲಾಪವನ್ನ ಮುಂದುವರೆಸಿದರು.ಈ ಹಿನ್ನೆಲೆ ಮತ್ತಷ್ಟು ಆಕ್ರೋಶಗೊಂಡ ಬಿಜೆಪಿ ಆಶಾಸಕರು ಖಾಗದಗಳನ್ನ ಹರಿದು ಹಾಕಿ ಸ್ಪೀಕರ್ ಅವರ ಪೀಠಕ್ಕೆ ಎಸೆದರು ಈ ಹಿನ್ನೆಲೆ ಸ್ಪೀಕರ್ ಯು ಟಿ ಖಾದರ್  ಬಿಜೆಪಿ 10 ಶಾಸಕರನ್ನ ಅಮಾನತು ಗೊಳಿಸಿದರು.

ಇಂದು ವಿರೋಧ ಪಕ್ಷದ ಸದಸ್ಯರು ಇಲ್ಲದೆ ಬಜೆಟ್ ಮೇಲಿನ ಚರ್ಚೆ ನಡೆಯಿತು.ನಂತರ ಗೃಹ ಸಚಿವ ಜೀ ಪರಮೇಶ್ವರ್ ಸಾರಿಗೆ ನೌಕರ ಜಗದೀಶ್ ಆತ್ಮಹತ್ಯೆ ಪ್ರಯತ್ನದ ಸಿಐಡಿ ವರದಿ ನೀಡಿದರು.ಈ ವೇಳೆ ಈ ವರದಿ ನಮಗೆ ಸಮಾಧಾನಕಾರವಾಗಿಲ್ಲ ಎಂದು ಶಾಸಕ ನಾರಾಯಣ್ ಸ್ವಾಮಿ, ಸಚಿವ ಚೆಲುವರಾಯಸ್ವಾಮಿ ಪ್ರಶ್ನೇ ಮಾಡಿದ್ರು.ಈದಕ್ಕೆ ಉತ್ತರಿಸಿದ ಗೃಹ ಸಚಿವರು ನಾವು ಸೂಕ್ತವಾಗಿ ತನಿಖೆ ಮಾಡುತ್ತೇವೆ ನಿಮಗೆ ಏ‌ನಾದ್ರು ಸಂಶಯ ಇದ್ರೆ ಲೀಖಿತ ಮುಖಾಂತರ ನಮಗೆ ಕೊಡಿ ಅದನ್ನ ನಾವು ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು.

ಬಜೆಟ್ ಮೇಲಿನ ಪ್ರಶ್ನೇಗಳಿಗೆ ಉತ್ತರ ಕೊಟ್ಟ ಸಿಎಂ ಸಿದ್ದರಾಮಯ್ಯ ನಾನು‌ ಕೆಲವರು ನನ್ನ ಬಜೆಟ್ ಟೀಕೆ ಮಾಡಿದ್ದಾರೆ. ಕೆಲವರು ಸ್ವಾಗತ ಮಾಡಿದ್ದಾರೆ. ಇಬ್ಬರ ಮಾತನ್ನು ನಾನು ಸ್ವಾಗತ ಮಾಡುತ್ತೇನೆ.ಹೊಸ ಸದಸ್ಯರು ಬಜೆಟ್ ಚರ್ಚೆ ಯಲ್ಲಿ ಭಾಗವಹಿಸಿ ಅನೇಕ ಸಲಹೆ ನೀಡಿದ್ದಾರೆ.ಯಾರು ಯಾರು ಭಾಗವಹಿಸಿದ್ರು ಅವರು ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ.ನಾನು 14 ಬಜೆಟ್ ಮಂಡಿಸಿದ್ದೇನೆ.ನಾನು ಮೊದಲ ಬಾರಿಗೆ ವಿಪಕ್ಷ ಗಳು ಇಲ್ಲದೇ ಉತ್ತರ ಕೊಡುವ ಪರಿಸ್ಥಿತಿ ಬಂದಿದೆ.ನನ್ನ ಎದುರುಗಡೆ ಒಬ್ಬ ಸದಸ್ಯರು ಇಲ್ಲದೆ ಖಾಲಿ ಕುರ್ಚಿಗಳಿಗೆ ನಾನು ಉತ್ತರ ಕೊಡ್ತಿರೋದು ಬಹಳ ದುಃಖದ ಸಂಗತಿ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆ ಎಫೆಕ್ಟ್