Publish Date: Thu, 20 Jul 2023 (17:30 IST)
Updated Date: Thu, 20 Jul 2023 (16:54 IST)
ಬಿಜೆಪಿಯ ೧೦ ಶಾಸಕರ ಅಮಾನತು ಖಂಡಿಸಿ ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಗ್ತಿದೆ.ಬಿಜೆಪಿ ಶಾಸಕರ ಪ್ರತಿಭಟನೆ ಆರಂಭವಾಗಿದ್ದುಸುನೀಲ್ ಕುಮಾರ್ , ಹರೀಶ್ ಪೂಂಜ , ಬೈರತಿ ಬಸವರಾಜು , ಗೋಪಾಲಯ್ಯ ಶಿವರಾಮ ಹೆಬ್ಬಾರ್, ಸೇರಿ ಶಾಸಕರು ಎಂಎಲ್ ಸಿ ಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವ್ಯಾಪಾಕ ಆಕ್ರೋಶ ಹೊರಹಾಕ್ತಿದ್ದಾರೆ.
15 ನಿಮಿಷ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಅನ್ನು ಕಾಯಿಸಿದ್ದಾರೆ ಎಂದು ಬಿಜೆಪಿ ಗರಂ ಆಗಿದ್ದು,ಒಬ್ಬ ರಾಜ್ಯದ ಸ್ಪೀಕರ್ ನ್ನ ತಾಜ್ ಹೋಟೆಲ್ ಗೇಟ್ ಮುಂದೆ ನಿಲ್ಲಿಸಿದ್ದಾರೆ.ಛೆ.. ಛೆ.. ಛೆ.. ಎಂದು ಬಿಜೆಪಿ ನಾಯಕರರು ವ್ಯಂಗ್ಯ ಮಾಡಿದ್ದಾರೆ.ಸಭಾಧ್ಯಕ್ಷರಿಗೆ ಅವಮಾನ ಅವಮಾನ ಎಂದು ಬಿಜೆಪಿ ಧರಣಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.