ಲಾಡ್ಜ್ ಮ್ಯಾನೇಜರ್ ಒಬ್ಬರನ್ನು ಹಾಡುಹಗಲೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಗುಂಡು ಹೊಡೆದು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
									
			
			 
 			
 
 			
					
			        							
								
																	ಕಲಬುರ್ಗಿಯಲ್ಲಿ ಪೊಲೀಸರಿಂದ ಕೊಲೆ ಆರೋಪಿಗೆ ಗುಂಡೇಟು ಬಿದ್ದಿದೆ.  
ಕಲಬುರ್ಗಿ ಬಸ್ ನಿಲ್ದಾಣದ ಮುಂದೆ ಹಾಡುಹಗಲೇ ಲಾಡ್ಜ್ ಮ್ಯಾನೇಜರ್ ನನ್ನು ಕೊಚ್ಚಿ ಕೊಂದ ಆರೋಪಿಗೆ ಗುಂಡೇಟು ತಗುಲಿದೆ.
									
										
								
																	ಸಂತೋಷ ಸ್ವಾಮಿ ಗುಂಡೇಟಿನಿಂದ ಗಾಯಗೊಂಡ ಕೊಲೆ ಆರೋಪಿಯಾಗಿದ್ದಾನೆ. ಆರೋಪಿಯನ್ನು
ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿ ಸಂತೋಷ ಸ್ವಾಮಿ ದಾಳಿಯಿಂದ ತಪ್ಪಿಸಿಕೊಳ್ಳಲು ಆತ್ಮರಕ್ಷಣೆಗಾಗಿ ಕೊಲೆ ಆರೋಪಿಯ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ ಪೊಲೀಸರು.  ಆರ್.ಜಿ ನಗರ ಪಿ.ಎಸ್.ಐ ಮಹಾಂತೇಶ ಫೈರಿಂಗ್ ನಡೆಸಿ ಬಂಧಿಸಿದ್ದಾರೆ.
									
											
							                     
							
							
			        							
								
																	ಈ ಘಟನೆ ಶಹಾಬಾದ ಬಳಿಯ ವಾಡಿ ರಸ್ತೆಯಲ್ಲಿ ನಡೆದಿದೆ. ಗಾಯಾಳು ಪೊಲೀಸರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಂಡೇಟಿನಿಂದ ಗಾಯಗೊಂಡ ಕೊಲೆ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.