ನೀರು ಇಲ್ಲದೆ ಇದ್ರೆ ಕುಡಿಯಲು ನೀರು ಸಿಗುತ್ತಾ, ಆಗ ಸರ್ಕಾರ ಇರುತ್ತಾ ಎಂದು ಖಾರವಾಗಿ ಪ್ರಶ್ನಿಸಿರುವ ಜೆಡಿಎಸ್ ಮುಖಂಡ ಜಿ.ಟಿ. ದೇವೇಗೌಡ ಈ ಸರ್ಕಾರಕ್ಕೆ ಕಾವೇರಿ ಬಗ್ಗೆ ಕಾಳಜಿ ಇಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ತಮ್ಮ ವಾದ ಮಂಡಿಸಲು ಸರ್ಕಾರ ವಿಫಲವಾಗಿದೆ. ಹವಾಮಾನ ಇಲಾಖೆ ವರದಿ ನೀಡಿದಾಗಲೇ ಪ್ರಾಧಿಕಾರದ ಮುಂದೆ ಸರ್ಕಾರ ಹೋಗಬೇಕಿತ್ತು. ಸಂಕಷ್ಟ ಸೂತ್ರ ರೂಪಿಸುವಂತೆ ಮನವಿ ಮಾಡಬೇಕಿತ್ತು. ಯಾವ ಆದೇಶ ಇಲ್ಲದೇ ಇದ್ದಾಗಲೇ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ, ಸ್ಟಾಲಿನ್ ಜೊತೆ ಸೇರಿ ಇಂಡಿಯಾ ಒಕ್ಕೂಟವನ್ನು ಅಧಿಕಾರಕ್ಕೆ ತರಲು ನೀರು ಬಿಟ್ಟಿದ್ದಾರೆಂದು ದೂರಿದರು.