Select Your Language

Notifications

webdunia
webdunia
webdunia
webdunia

ಕಾವೇರಿ ಹೋರಾಟ ಮತ್ತಷ್ಟು ತೀವ್ರ

ಕಾವೇರಿ ಹೋರಾಟ ಮತ್ತಷ್ಟು ತೀವ್ರ
ಮಂಡ್ಯ , ಬುಧವಾರ, 27 ಸೆಪ್ಟಂಬರ್ 2023 (19:43 IST)
ತಮಿಳುನಾಡಿಗೆ ನೀರು ಹರಿಸಲು ನೀಡಿರುವ ಆದೇಶ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.ಮಂಡ್ಯದ ಸಂಜಯ ವೃತ್ತದಲ್ಲಿ ನಡೆದ ಪ್ರತಿಭಟನೆ ನಡೆಸಿದ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಹೆಬ್ಬರಳಿನಿಂದ ರಕ್ತ ಕೊಟ್ಟು ಆಕ್ರೋಶ ವ್ಯಕ್ತಪಡಿಸಿದರು. ರಕ್ತ ಕೊಡುತ್ತವೆ ಹೊರತು ನೀರು ಕೊಡುವುದಿಲ್ಲ ಎಂದು ಕಿಡಿಕಾರಿದರು. ರಸ್ತೆ ತಡೆ ನಡೆಸಿ ಕೈ ಕುಯ್ದುಕೊಂಡು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯನ್ನ ವಿರೋಧಿಸಿ ಮಂಡ್ಯಯಲ್ಲಿ ಪ್ರತಿಭಟನೆಗಳು ಜೋರಾಗ್ತಿವೆ. ಜಿಲ್ಲಾಧಿಕಾರಿ ಕಚೇರಿ ಬಳಿ ಮೈಮೇಲೆ ಸಗಣಿ ಸುರಿದುಕೊಂಡು ವಿನೂತನವಾಗಿ ಪ್ರತಿಭಟನೆ ಮಾಡಿದ್ರು. ಬಿಜೆಪಿ ನಾಯಕರು ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶವನ್ನ ಹೊರಹಾಕಿದ್ರು. ನಮಗೆ ಬೆಳೆ ಬೆಳೆಯೋದಕ್ಕೆ ನೀರು ಸಿಗ್ತಿಲ್ಲ. ಬದುಕೋದು ಹೇಗೆ ಅಂತ ಆಕ್ರೋಶ ಹೊರಹಾಕಿದ್ರು.

ಮಂಡ್ಯದಲ್ಲಿ ಕಾವೇರಿ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಕಾವೇರಿ ಹೋರಾಟಕ್ಕೆ ನಂಜಾವಧೂತ ಸ್ವಾಮೀಜಿ ಸಾಥ್​ ನೀಡಿದ್ದಾರೆ. ರೈತ ಹಿತರಕ್ಷಣಾ ಸಮಿತಿ ಧರಣಿಯಲ್ಲಿ ಶ್ರೀಗಳು ಭಾಗಿಯಾಗಿದ್ರು. ಕನ್ನಡಸೇನೆ, ಕರವೇ ವತಿಯಿಂದ ಪ್ರತಿಭಟನೆ ನಡೆಯುತ್ತಿದೆ. ಕಾವೇರಿ ಭವನದಿಂದ ಸಂಜಯ್ ವೃತ್ತದವರೆಗೂ ಕಾಲ್ನಡಿಗೆ ಜಾಥ ಮಾಡಿದ್ರು. ಕಾಲ್ನಡಿಗೆಯಲ್ಲೇ ಪ್ರತಿಭಟನಾ ಸ್ಥಳಕ್ಕೆ ನಂಜಾವಧೂತ ಶ್ರೀ ಆಗಮಿಸಿ ಪ್ರತಿಭಟನೆಯಲ್ಲಿ ಭಾಗಿಯಾದ್ರು.

ಮಂಡ್ಯ ಜಿಲ್ಲೆಯಲ್ಲಿ ರೈತರ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಮಾಜಿ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಾವಿರಾರು ರೂ. ಖರ್ಚು ಮಾಡಿ ಕೃಷಿ ಮಾಡಿ ಈಗ ಸಂಕಷ್ಟದಲ್ಲಿದ್ದಾರೆ. ಈಗ KRSನಲ್ಲಿ 76 ಅಡಿ ಮಾತ್ರ‌ ನೀರು ಉಳಿದಿದೆ. 62 ಅಡಿ ಆದಮೇಲೆ ನೀರನ್ನ ಬಳಸಲು ಆಗಲ್ಲ. ಡೆಡ್ ಸ್ಟೋರೇಜ್ ಆಗಲಿದೆ. ಇದನ್ನ ಬೆಂಗಳೂರು ಜನ ಅರ್ಥ ಮಾಡಿಕೊಳ್ಳಬೇಕು. ಜನರನ್ನ ತಪ್ಪು ದಾರಿಗೆ ಕೊಂಡೊಯ್ತಿದಾರೆ. ಇದು ನಾಚಿಕೆಗೇಡಿನ ಕೆಲಸ. ಕೂಡಲೇ ನೀರು ಹರಿಸೋದನ್ನ ನಿಲ್ಲಿಸಬೇಕು. ರಾಜ್ಯದ ಜನರ ರಕ್ಷಣೆಗೆ‌ ಬರಬೇಕು ಎಂದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿಯ ಕಹಿ ಅನುಭವ ನೋಡಿದ್ದೇವೆ