Select Your Language

Notifications

webdunia
webdunia
webdunia
webdunia

ಚಿಕ್ಕಮಗಳೂರಿನಿಂದ ತಿರುಪತಿಗೆ ಹೊರಟ ಮೊದಲ ರೈಲು, ದೀರ್ಘದಂಡ ನಮಸ್ಕಾರ ಮಾಡಿದ ವೃದ್ಧೆ

ಚಿಕ್ಕಮಗಳೂರಿನಿಂದ ತಿರುಪತಿಗೆ ಮೊದಲ ರೈಲು

Sampriya

ಚಿಕ್ಕಮಗಳೂರು , ಶುಕ್ರವಾರ, 11 ಜುಲೈ 2025 (18:51 IST)
Photo Credit X
ಚಿಕ್ಕಮಗಳೂರು: ಚಿಕ್ಕಮಗಳೂರಿನಿಂದ ಆಂಧ್ರಪ್ರದೇಶದ ತಿರುಪತಿಗೆ ತೆರಳುವ ರೈಲಿಗೆ ಇಂದು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು. ತಿರುಪತಿಗೆ ಹೊರಟಿದ್ದ ಹೊಸ ರೈಲಿಗೆ ವೃದ್ಧೆಯೊಬ್ಬರು ದೀರ್ಘದಂಡ ನಮಸ್ಕಾರ ಮಾಡುವ ಮೂಲಕ ಭಕ್ತಭಾವ ಮೆರೆದರು.

ಅಲಂಕಾರಗೊಂಡಿದ್ದ ರೈಲಿನ ಮುಂದೆ ಹಳಿಗಳ ಮೇಲೆ ಇಳಿದ ಹಿರೇಮಗಳೂರಿನ ಭಾಗಲಕ್ಷ್ಮಿ ಅವರು ಮೂರು ಬಾರಿ ಅಡ್ಡಬಿದ್ದು ನಮಸ್ಕರಿಸಿದರು. 

ವೃದ್ಧೆಯ ಭಕ್ತಿಗೆ ಪ್ರತಿಕ್ರಿಯಿಸಿದ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಕಲ್ಪನೆಯಿಂದ ಇದು ಸಾಧ್ಯವಾಗಿದೆ. ತಿರುಪತಿಗೆ ರೈಲು ಆರಂಭವಾಗಿರುವುದಕ್ಕೆ ಈ ತಾಯಿಗೆ ಸಂತೋಷವಾಗಿದೆ. ತಿರುಪತಿ ತಿಮ್ಮಪ್ಪನಿಗೆ ಮಾಡಿದಷ್ಟೇ ನಮಸ್ಕಾರವನ್ನು ಈ ತಾಯಿಗೂ ಮಾಡುತ್ತೇನೆ’ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಶಿಸ್ತಿನ ಸಿಪಾಯಿ, ಸಿಎಂ ಆಗುವುದು ನಿಶ್ಚಿತ: ನಿಶ್ಚಲಾನಂದನಾಥ ಸ್ವಾಮೀಜಿ ಭರವಸೆ