Select Your Language

Notifications

webdunia
webdunia
webdunia
webdunia

ಬೈಕ್ ಸವಾರನ ಜತೆ ಗಲಾಟೆಗಿಳಿದು ಆತನ ಮೇಲೆ ಎರಡು ಸುತ್ತು ಗುಂಡು ಹಾರಿಸಿದ ಕಾರಿನ ಚಾಲಕ

ಬೈಕ್ ಸವಾರನ ಜತೆ ಗಲಾಟೆಗಿಳಿದು ಆತನ ಮೇಲೆ ಎರಡು ಸುತ್ತು ಗುಂಡು ಹಾರಿಸಿದ ಕಾರಿನ ಚಾಲಕ
bangalore , ಶುಕ್ರವಾರ, 15 ಅಕ್ಟೋಬರ್ 2021 (21:47 IST)
ತನ್ನ ಆಡಿ ಕಾರಿಗೆ ಬೈಕ್ ತಾಗಿಸಿದ ಎಂದು ಬೈಕ್ ಸವಾರನ ಜತೆ ಗಲಾಟೆಗಿಳಿದು ಆತನ ಮೇಲೆ ಎರಡು ಸುತ್ತು ಗುಂಡು ಹಾರಿಸಿದ ಕಾರಿನ ಚಾಲಕನನ್ನು ಯಶವಂತಪುರ ಠಾಣೆ ಪೆÇಲೀಸರು ಬಂಧಿಸಿದ್ದಾರೆ.  
ಅಂಬ್ಯುಲೆನ್ಸ್ ಚಾಲಕ ಬೀದರ್ ಮೂಲದ ಅನೀಲ್ (27) ಪ್ರಾಣಪಾಯದಿಂದ ಪಾರಾದವರು. ಗುಂಡು ಹಾರಿಸಿದ ಆಡಿ ಕಾರಿನ ಚಾಲಕ ಮಹಾಲಕ್ಷ್ಮಿ ಲೇಔಟ್‍ನ ಹೋಟೆಲ್‍ನ ಮಾಲೀಕ ರವೀಶ್ ಗೌಡ ಬಂಧಿತ. ಆರೋಪಿಯಿಂದ ಕಾರು ಹಾಗೂ ಪಿಸ್ತೂಲ್ ಹಾಗೂ ಗನ್ ಪರವಾನಗಿ ಪತ್ರ ವಶಕ್ಕೆ ಪಡೆಯಲಾಗಿದೆ ಎಂದು ಪೆÇಲೀಸರು ತಿಳಿಸಿದರು.  
ಯಶವಂತಪುರ ಠಾಣಾ ವ್ಯಾಪ್ತಿಯ ಎಂ.ಎಸ್.ರಾಮಯ್ಯ ಆಸ್ಪತ್ರೆ ಹಿಂಬದಿಯ ರಸ್ತೆಯಲ್ಲಿ ತನ್ನ ಐಷಾರಾಮಿ ಆಡಿ ಕಾರಿಗೆ ಬೈಕ್ ತಾಗಿಸಿದ್ದಾನೆ ಎಂದು ಕೋಪಗೊಂಡ ಕಾರು ಚಾಲಕ ರವೀಶ್ ಗೌಡ, ಬೈಕ್ ಸವಾರ ಅನಿಲ್? ಜತೆ ಜಗಳಕ್ಕಿಳಿದಿದ್ದಾರೆ.  ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಾಗ ರವೀಶ್‍ಗೌಡ ತಮ್ಮ ಕಾರಿನಲ್ಲಿದ್ದ ಪಿಸ್ತೂಲ್ ತೆಗೆದು ಎರಡು ಬಾರಿ ಅನಿಲ್ ಮೇಲೆ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಅನಿಲ್ ಗುಂಡಿನಿಂದ ತಪ್ಪಿಸಿಕೊಂಡು ಪ್ರಾಣಪಾಯದಿಂದ ಪಾರಾಗಿದ್ದಾರೆ. ಬಳಿಕ ಅನಿಲ್ ಕಾರು ಚಾಲಕನ ವಿರುದ್ಧ ಯಶವಂತಪುರ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. 
ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಎಂ.ಎಸ್. ರಾಮಯ್ಯ ಆಸ್ಪತ್ರೆ ಬಳಿ ಇರುವ ಹಾಗೂ ರಸ್ತೆಯಲ್ಲಿರುವ ಹಲವು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ಕಾರಿನ ನಂಬರ್ ಹಾಗೂ ಚಾಲಕ ಮುಖಚಹರೆ ಪತ್ತೆಯಾಗಿದೆ. ಕಾರಿನ ವಿಳಾಸ ಬೆನ್ನತ್ತಿ ಹೋದಾಗ ಆರೋಪಿ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಹೋಟೆಲ್ ಮಾಲೀಕ ರವೀಶ್ ಗೌಡ ಎಂದು ತಿಳಿದು ಬಂದಿದೆ. ಸದ್ಯ ಆರೋಪಿ ಬಂಧಿಸಿ 307, 323, ಶಸ್ತ್ರಾಸ್ತ್ರ ಕಾಯಿದೆಯಡಿ ಪ್ರಕರಣ ದಾಖಲಿಸಿಲಾಗಿದೆ ಎಂದು ಪೆÇಲೀಸರು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ದೃಶ್ಯಾವಳಿಗಳನ್ನು ಸೆರೆಹಿಡಿದು ಒಂದು ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಮಹಿಳೆ