Select Your Language

Notifications

webdunia
webdunia
webdunia
webdunia

ಖಾಸಗಿ ದೃಶ್ಯಾವಳಿಗಳನ್ನು ಸೆರೆಹಿಡಿದು ಒಂದು ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಮಹಿಳೆ

A woman who captured private footage and demanded Rs 1 crore
bangalore , ಶುಕ್ರವಾರ, 15 ಅಕ್ಟೋಬರ್ 2021 (21:40 IST)
ಗುತ್ತಿಗೆದಾರರೊಬ್ಬರ ಜತೆ ಸಲುಗೆ ಬೆಳೆಸಿ ಇಬ್ಬರು ಒಟ್ಟಿಗಿರುವ ಖಾಸಗಿ ದೃಶ್ಯಾವಳಿಗಳನ್ನು ಸೆರೆಹಿಡಿದು ಒಂದು ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಮಹಿಳೆಯೊಬ್ಬಳು ಅನ್ನಪೂರ್ಣೇಶ್ವರಿನಗರ ಠಾಣೆ ಪೆÇಲೀಸರ ಬಲೆಗೆ ಬಿದ್ದಿದ್ದಾಳೆ. 
ಹನಿ ಟ್ರ್ಯಾಪ್ ಬಲೆ ಎಣೆದಿದ್ದ ವಿಜಯನಗರದ ನಿವಾಸಿ ವಿದ್ಯಾ(32) ಬಂಧಿತೆ. ಗುತ್ತಿಗೆದಾರ ಅನ್ನಪೂರ್ಣೇಶ್ವರಿನಗರದ ನಿವಾಸಿ ಲೋಹಿತ್ (38) ಹನಿಟ್ರ್ಯಾಪ್‍ಗೆ ಒಳಗಾದವರು. 
ಯುವತಿಯ ಪರಿಚಯ:
ಕಳೆದು ಮೂರು ತಿಂಗಳ ಹಿಂದೆ ಸಿವಿಲ್ ಗುತ್ತಿಗೆದಾರ ಲೋಹಿತ್ ನಾಗರಬಾವಿಯ ನಮ್ಮೂರ ತಿಂಡಿ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ನಿಂತಿದ್ದರು. ಈ ವೇಳೆ ಅವರ ಬಳಿ ಬಂದ ಇಬ್ಬರು ಯುವಕರು, ನಮ್ಮ ಬಳಿ ಇರುವ ಹರ್ಬಲ್ ಲೈಫ್ ಉತ್ಪನ್ನಗಳನ್ನು ತೆಗೆದುಕೊಂಡರೆ ನೀವು ಬೇಗ ಸಣ್ಣಗಾಗುತ್ತೀರಿ ಎಂದು ನಂಬಿಸಿದ್ದರು. ನಂತರ ಆರೋಪಿಗಳು ವಿದ್ಯಾ ಮೊಬೈಲ್ ನಂಬರ್ ಕೊಟ್ಟು ನೀವು ಈ ನಂಬರ್‍ಗೆ ಕರೆ ಮಾಡಿ ಮಾತನಾಡಿ ಎಂದಿದ್ದರು. ಅದರಂತೆ ವಿದ್ಯಾಗೆ ಕರೆ ಮಾಡಿದ್ದ ಲೋಹಿತ್ ಹರ್ಬಲ್ ಲೈಫ್ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದು ಅದನ್ನು ಖರೀದಿಸಿದ್ದರು. ನಂತರ ಆಗಾಗ ಲೋಹಿತ್‍ಗೆ ಕರೆ ಮಾಡುತ್ತಿದ್ದ ವಿದ್ಯಾ ಸಲುಗೆ ಬೆಳೆಸಿಕೊಂಡಿದ್ದಳು. ದಿನ ಕಳೆದಂತೆ ಸಲುಗೆ ಬೆಳೆಸಿಕೊಂಡಿದ್ದ ಯುವತಿ ಇತ್ತೀಚೆಗೆ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್‍ಗೆ ಲೋಹಿತ್ ಕರೆದುಕೊಂಡು ಹೋಗಿದ್ದಳು. ಈ ವೇಳೆ ಇಬ್ಬರೂ ಆತ್ಮೀಯವಾಗಿ ಏಕಾಂತದಲ್ಲಿದ್ದರು. ಕೆಲ ಸಮಯದ ಬಳಿಕ ವಿದ್ಯಾ ಮಾದಕ ವಸ್ತು ಸೇವಿಸಿ ರೆಸಾರ್ಟ್ ಸಿಬ್ಬಂದಿ ಜತೆ ಜಗಳ ಮಾಡಿದ್ದಳು. ಆಕೆಯನ್ನು ಲೋಹಿತ್ ಸಮಾಧಾನಪಡಿಸಿದರೂ ಆಕೆ ಕೇಳದಾಗ ವಿದ್ಯಾಳನ್ನು ಅಲ್ಲಿಯೇ ಬಿಟ್ಟು ಲೋಹಿತ್ ಮನೆಗೆ ಬಂದಿದ್ದರು. 
ಖಾಸಗಿ ದೃಶ್ಯಾಗಳಿರುವ ಪೆನ್‍ಡ್ರೈವ್ ನೀಡಿ ಬ್ಲ್ಯಾಕ್ ಮೇಲ್:
ಸೆ.29ರಂದು ವಿದ್ಯಾ, ಲೋಹಿತ್‍ಗೆ ಕರೆ ಮಾಡಿ ನಾಗರಬಾವಿ ಬಳಿ ಬರುವಂತೆ ಸೂಚಿಸಿದ್ದಳು. ಲೋಹಿತ್ ಆಕೆಯನ್ನು ಭೇಟಿಯಾದಾಗ ಇವರಿಬ್ಬರೂ ರೆಸಾರ್ಟ್‍ನಲ್ಲಿ ಕಳೆದಿದ್ದ ಖಾಸಗಿ ಫೆÇೀಟೊಗಳನ್ನು ತೋರಿಸಿ 1 ಕೋಟಿ ರೂ. ಕೊಡುವಂತೆ ಬ್ಲ್ಯಾಕ್‍ಮೇಲ್ ಮಾಡಿದ್ದಳು. ಇದರಿಂದ ಆತಂಕಗೊಂಡ ಲೋಹಿತ್ ಆರಂಭದಲ್ಲಿ 2 ಲಕ್ಷ ರೂ. ಕೊಟ್ಟಿದ್ದರು. ಇದಾದ ಕೆಲ ದಿನಗಳ ಬಳಿಕ ವಿದ್ಯಾ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದಳು. ಕೆಲ ದಿನಗಳ ಹಿಂದೆ ಇಬ್ಬರು ಅಪರಿಚಿತ ಹುಡುಗರು ಲೋಹಿತ್‍ನ್ನು ಭೇಟಿಯಾಗಿ ಪೆನ್‍ಡ್ರೈವ್ ಕೊಟ್ಟು ಇದರಲ್ಲಿ ಇರುವುದನ್ನು ನೋಡಿ ಎಂದು ಹೇಳಿ ಹೋಗಿದ್ದರು. ಪೆನ್‍ಡ್ರೈವ್‍ನಲ್ಲಿ ಏನಿದೆ ಎಂದು ಪರಿಶೀಲಿಸಿದಾಗ ವಿದ್ಯಾ ಮತ್ತು ಲೋಹಿತ್ ರೆಸಾರ್ಟ್‍ನಲ್ಲಿ ಕಳೆದಿದ್ದ ಹಲವಾರು ಖಾಸಗಿ ದೃಶ್ಯಗಳಿದ್ದವು. ವಿದ್ಯಾಗೆ ಕರೆ ಮಾಡಿದ ಲೋಹಿತ್ ಈ ಬಗ್ಗೆ  ಪ್ರಶ್ನಿಸಿದ್ದರು. 1 ಕೋಟಿ ರೂ. ಕೊಡದಿದ್ದರೆ, ವಿವಾಹವಾಗುವುದಾಗಿ ನಂಬಿಸಿ ವಂಚಿಸಿರುವುದಾಗಿ ನಿಮ್ಮ ವಿರುದ್ಧ ಪೆÇಲೀಸರಿಗೆ ದೂರು ಕೊಡುತ್ತೇನೆ ಎಂದು ಬೆದರಿಸಿದ್ದಳು.
ಆತಂಕಗೊಂಡ ಲೋಹಿತ್ ಅನ್ನಪೂರ್ಣೇಶ್ವರಿನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹರ್ಬಲ್ ಲೈಫ್ ಪ್ರಾಡಕ್ಟ್ ಮಾರಾಟ ಮಾಡುವುದಾಗಿ ತನ್ನಂತೆಯೇ ಹಲವು ಪ್ರಭಾವಿಗಳನ್ನು ವಿದ್ಯಾ ಬಲೆಗೆ ಬೀಳಿಸಿದ್ದಾಳೆ ಎಂದು ದೂರಿನಲ್ಲಿ ಲೋಹಿತ್ ಆರೋಪಿಸಿದ್ದಾರೆ. 
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ತನಿಖೆ ನಡೆಸಿದಾಗ ವಿದ್ಯಾ ಹನಿಟ್ರ್ಯಾಪ್ ನಡೆಸಿರುವುದು ಪತ್ತೆಯಾಗಿತ್ತು. ಕೂಡಲೇ ಆಕೆಯನ್ನು ಬಂ„ಸಿ ಜೈಲಿಗಟ್ಟಿದ್ದಾರೆ. ಈಕೆಗೆ ಸಹಕರಿಸುತ್ತಿದ್ದ ಇಬ್ಬರು ಹುಡುಗರಿಗೆ ಶೋಧ ಮುಂದುವರೆಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಬ್ಯಾಂಕ್‍ನಲ್ಲಿ ದೊಡ್ಡ ಮೊತ್ತದ ಠೇವಣಿ ಇಡುವುದಾಗಿ ನಂಬಿಸಿ 43.44 ಲಕ್ಷ ರೂ. ಪಡೆದು ವಂಚನೆ