Select Your Language

Notifications

webdunia
webdunia
webdunia
webdunia

ಖಾಸಗಿ ಬ್ಯಾಂಕ್‍ನಲ್ಲಿ ದೊಡ್ಡ ಮೊತ್ತದ ಠೇವಣಿ ಇಡುವುದಾಗಿ ನಂಬಿಸಿ 43.44 ಲಕ್ಷ ರೂ. ಪಡೆದು ವಂಚನೆ

ಖಾಸಗಿ ಬ್ಯಾಂಕ್‍ನಲ್ಲಿ ದೊಡ್ಡ ಮೊತ್ತದ ಠೇವಣಿ ಇಡುವುದಾಗಿ ನಂಬಿಸಿ 43.44 ಲಕ್ಷ ರೂ. ಪಡೆದು ವಂಚನೆ
bangalore , ಶುಕ್ರವಾರ, 15 ಅಕ್ಟೋಬರ್ 2021 (21:38 IST)
ಉದ್ಯಮಿ ಹೆಸರಿನಲ್ಲಿ ಖಾಸಗಿ ಬ್ಯಾಂಕ್ ಅಧಿಕಾರಿಯ ವಿಶ್ವಾಸ ಗಳಿಸಿದ ಸೈಬರ್ ವಂಚಕರು ಖಾಸಗಿ ಬ್ಯಾಂಕ್ನಲ್ಲಿ ದೊಡ್ಡ ಮೊತ್ತದ ಠೇವಣಿ ಇಡುವುದನ್ನು ನಂಬಿಸಿ ಅವರಿಂದ 43.44 ಲಕ್ಷ ರೂ. ಪಡೆದು ವಂಚಿಸಲಾಗಿದೆ. 
ಖಾಸಗಿ ಬ್ಯಾಂಕ್ ನೌಕರ ಪಿ.ಎಸ್. ಪಾಟೀಲ್ ವಂಚನೆಗೊಳಗುತ್ತಿದೆ, ಅವರು ನೀಡಿದ ದೂರಿನ ಮೇರೆಗೆ ಕೇಂದ್ರ ವಿಭಾಗದ ಸಿಇಎನ್ ಠಾಣೆ ಪೆ Ç ಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 
ವಂಚನೆ ಹೇಗೆ?
ಖಾಸಗಿ  ಬ್ಯಾಂಕ್ ಅಧಿಕಾರಿ ಪಿ.ಎಸ್. ಪಾಟೀಲ್ ಅವರಿಗೆ ಅ.7ರಂದು ಕರೆ ಮಾಡಿದ್ದ ಸೈಬರ್ ವಂಚಕ, ತಾನು ರಾಮದೊರೈ 3ಎಂ ಪ್ರೈ.ಲಿ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂದು ಪರಿಚಯ ಮಾಡಿಕೊಂಡಿದ್ದ. ಬಳಿಕ ತಮ್ಮ ಕಂಪನಿ ಅಧಿಕ ಲಾಭ ಗಳಿಸುತ್ತಿದ್ದು, ತನ್ನ ಬ್ಯಾಂಕ್ ಖಾತೆಯಲ್ಲಿ ಕೋಟ್ಯಾಂತರ ರೂ. ಹಣವಿದೆ. ಆದರೆ, ಈಗಿರುವ ಬ್ಯಾಂಕ್‍ನಲ್ಲಿ ನಿಶ್ಚಿತ ಠೇವಣಿಯಿಂದ ಹಣ ಬರುತ್ತಿಲ್ಲ ಎಂದು ಹೇಳಿಕೊಂಡಿದ್ದ. ಹಾಗಾಗಿ, ತಮ್ಮ ಬ್ಯಾಂಕ್‍ನಲ್ಲಿ ಖಾತೆ ತೆರೆದು ಠೇವಣಿ ಇಡಬೇಕು ಎಂದು ಬ್ಯಾಂಕ್ ಅಧಿಕಾರಿಗೆ ಉದ್ಯಮಿ ಹೆಸರಿನ ವಂಚಕ ತಿಳಿಸಿದ್ದ. ಅದಕ್ಕಾಗಿ ತಮ್ಮ ಕಚೇರಿಗೆ ಬಂದು ಭೇಟಿಯಾಗುವಂತೆಯೂ ತಿಳಿಸಿದ್ದ. ಇದನ್ನು ನಂಬಿದ ಪಾಟೀಲ್ ತಮ್ಮ ಮೊಬೈಲ್ ನಂಬರ್ ಕೂಡ ವಿನಿಮಯ ಮಾಡಿಕೊಂಡಿದ್ದರು.
 ಇದಾದ ಕೆಲ ಸಮಯದ ನಂತರ ಕರೆ ಮಾಡಿದ ಸೈಬರ್ ವಂಚಕ ತಂತ್ರಜ್ಞಾನ ಸಮಸ್ಯೆಯಿಂದ ತನ್ನ ಖಾತೆಯಲ್ಲಿರುವ ಹಣವನ್ನು ಡ್ರಾ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ತಕ್ಷಣವೇ ವೆಂಡರ್‌ಗೆ ಪೇಮೆಂಟ್ ಮಾಡಲಾಗುತ್ತಿದೆ. ಹೀಗಾಗಿ, ಅಗತ್ಯವಿರುವ ಹಣ ನೀಡಿದರೆ ನಾಳೆ ಕಚೇರಿಗೆ ಬಂದಾಗ ಚಕ್ ನೀಡಬೇಕೆಂದು ತಿಳಿಸಲಾಗಿದೆ. ಇದನ್ನು ನಂಬಿದ ಪಾಟೀಲ್ ತಕ್ಷಣವೇ ನೀಡಿದ ಬ್ಯಾಂಕ್ ಖಾತೆಗೆ 43.44 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಮತ್ತೆ ಮಾರನೇ ದಿನ ಉದ್ಯಮಿ ಭೇಟಿ ಮಾಡಲು ಪಾಟೀಲ್ ಕರೆ ಮಾಡಲಾಯಿತು. ಆದರೆ, ರಾಮದೊರೈ ಎಂದು ಹೇಳಿಕೊಂಡಿದ್ದ ಉದ್ಯಮಿ ಮೊಬೈಲ್ ಸಂಖ್ಯೆ ಸ್ವಿಚ್ ಆಪ್ ಆಗಿದೆ. ಆಗಲೇ ಅವನು ಮೋಸ ಹೋಗುತ್ತಿರುವುದಕ್ಕೆ ಪಾಟೀಲ್ ಕೇಂದ್ರ ವಿಭಾಗದ ಸಿಐಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನಾ ಆದಿಗಳಲ್ಲಿ ವಂಚಿಸುತ್ತಿದ್ದ ಸೈಬರ್ ಖದೀಮರು