Select Your Language

Notifications

webdunia
webdunia
webdunia
webdunia

ಲೋಕಸಭೆ ಪ್ರವೇಶಿಸುವ ಕನಸು ಈಡೇರಲೇ ಇಲ್ಲ ಡಿಕೆಶಿ, ಸಿದ್ದುಗೆ.....!

cm sidaramayya

geetha

bangalore , ಗುರುವಾರ, 22 ಫೆಬ್ರವರಿ 2024 (18:21 IST)
ಬೆಂಗಳೂರು-ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಗ್ಯಾರಂಟಿ ದರ್ಬಾರ್‌ನ್ನು ನಡೆಸುತ್ತಿದೆ ಅಂದ್ರೆ, ಅದಕ್ಕೆ ಕಾರಣ ಪ್ರಮುಖ ಆ ಇಬ್ಬರು ನಾಯಕರುಗಳು. ಇವರೇ ಇಲ್ಲ ಅಂದಿದ್ರೆ, ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಕನಸ್ಸಿನಲ್ಲಿಯೂ ಅಧಿಕಾರವನ್ನು ಹಿಡಿಯುತ್ತೆ ಅಂತ ಊಹಿಸೋದಕ್ಕೂ ಆಗುತ್ತಿರಲಿಲ್ಲ.ಐದು ಗ್ಯಾರಂಟಿಗಳನ್ನು ಜಾರಿಗೆ ತಂದೂ ನುಡಿದಂತೆ ನಡೆದ ಕಾಂಗ್ರೆಸ್‌ನ ಈ ಇಬ್ಬರು ಸಮರ ಸೇನಾನಿಗಳಿಗೆ ರಾಜ್ಯದ ಮತದಾರ ಬಂಧುಗಳು ಅಕ್ಷರಶಃ ಸೆಲ್ಯೂಟ್ ಹೊಡೆಯುತ್ತಿದ್ದಾರೆ... ನಿಜ ಹೇಳಬೇಕಂದರೆ ಕಾಂಗ್ರೆಸ್‌ನ ರಿಯಲ್ ಜೋಡೆತ್ತು ಜೋಡಿಯೇ ಈ ಇಬ್ಬರು ಮಾಸ್‌ಲೀಡರ್‌ಗಳು
 
ಡೆಲ್ಲಿಯ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೂ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಏನೇ ಆದರೂ ಈ ಜೋಡೆತ್ತು ಇರೋದ್ರಿಂದ ಅಷ್ಟಾಗಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ... ಯಾಕಂದ್ರೆ ಇವರಿಬ್ಬರು ಒಟ್ಟಿಗೆ ಅಖಾಡಕ್ಕೆ ಇಳಿದರೂ ಅಂದ್ರೆ, ಅಲ್ಲಿಂದಲ್ಲಿಗೆ ಎಲ್ಲವೂ ಶಮನ. ಕಾಂಗ್ರೆಸ್ ಬರೋಬ್ಬರಿ ೧೩೫ ಸ್ಥಾನಗಳನ್ನು ಗೆದ್ದು ಹೊಸ ಚರಿತ್ರೆಯನ್ನು ಬರಿದಾಗಿದೆ... ಇದರಲ್ಲಿ ಬಹುತೇಕ ಕಾಂಟ್ರಿಬ್ಯೂಶನ್ ಸೇರಬೇಕಾಗಿರೋದು ಇದೇ ಜೋಡಿಗೆ..... ಅದೇ ಸಿದ್ದು ಮತ್ತು ಡಿಕೆಶಿ ಜೋಡಿ.
 
ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಬಿಜೆಪಿಯನ್ನು ಅಕ್ಷರಶಃ ಮಕಾಡೆ ಮಲಗಿಸಿದ ಹಿರಿಮೆ ಡಿಕೆಶಿ ಮತ್ತು ಸಿದ್ದರಾಮಯ್ಯಗೆ ಸೇರಬೇಕಾಗಿದೆ. ಒಬ್ಬರು ಮಾಸ್ ಲೀಡರ್, ಅಹಿಂದ ವರ್ಗದ ಪ್ರಬಲ ನಾಯಕ, ಲೆಕ್ಕದಲ್ಲಿ ಪಕ್ಕಾ ಇರುವ ಬಜೆಟ್ ರಾಮಯ್ಯ. ಅದೇ ರೀತಿಯಾಗಿ ಇನ್ನೊಬ್ಬರು ಕೆಪಿಸಿಸಿ ಸಾರಥಿ ಆಗಿದ್ದುಕೊಂಡೆ ಇಡೀ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿದ ಸಂಘಟನಾ ಚತುರ, ಚಾಣಾಕ್ಷ ಲೀಡರ್ ಡಿಕೆಶಿ...

 ಹೀಗೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಕಸರತ್ತು ಮಾಡಿ, ಒಬ್ಬರು ಸಿಎಂ ಮತ್ತು ಇನ್ನೊಬ್ಬರು ಡಿಸಿಎಂ ಆಗುವರೆಗೂ ಬಂದಿದ್ದಾರೆ... ಹಾಗೆ ನೋಡಿದರೆ ಇದೇನು ತಮಾಷೆಯ ವಿಚಾರವಂತೂ ಅಲ್ಲವೇ ಅಲ್ಲ... ನಿಜ ಹೇಳಬೇಕೆಂದ್ರೆ ಇದೊಂದು ತಪ್ಪಸ್ಸಿನ ಫಲ. ಅದಕ್ಕೇನೇ ಡಿಕೆಶಿ ಅಂಡ್ ಸಿದ್ದರಮಯ್ಯ ಯಾವತ್ತಿಗೂ ಗ್ರೇಟ್ ಅನ್ನೋದು
 
ಕರ್ನಾಟಕದ ರಾಜಕಾರಣದಲ್ಲಿ ಸದ್ದು ಮಾಡಿದಷ್ಟು ರಾಷ್ಟç ರಾಜಕಾರಣದಲ್ಲಿ ಮಾಡೋಕೆ ಸಾಧ್ಯವಾಗಲಿಲ್ಲ ಅನ್ನುವ ಕೊರಗು ಬಹುಶಃ ಸಿದ್ದಣ್ಣ ಮತ್ತು ರಣಬೇಟೆಗಾರ ಡಿಕೆಶಿಯನ್ನು ಕಾಡಿರಬಹುದು ಯಾಕಂದ್ರೆ ಈ ಹಿಂದೆ ಡಿಕೆಶಿ ಮತ್ತು ಇದೇ ಸಿದ್ದರಾಮಯ್ಯ ದೇಶದ ರಾಜಕಾರಣದ ಕಡೆಗೆ ಹೋಗಿ ನಿರಾಸೆ ಅನುಭವಿಸಿದ್ದಾರೆ... ಹಾಗಾಗಿ ಆ ಸೋಲಿನ ಕ್ಷಣಗಳು ಈ ಟೈಂಮಲ್ಲಿ ಕಾಡೋದು ಸಹಜ.
 
ಇವತ್ತು ಇಡೀ ರಾಜ್ಯ ಕಾಂಗ್ರೆಸ್ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ಸುಪರ್ದಿಯಲ್ಲೆ ಹೆಜ್ಜೆ ಹಾಕುತ್ತಿದೆ. ಗ್ಯಾರಂಟಿಗಳಿAದ ಹಿಡಿದು, ಇಡೀ ರಾಜ್ಯದ ಸರ್ವತೋಮುಖ ಅಭಿವೃಧ್ದಿಗೆ ಈ ಸಿದ್ದು ಮತ್ತು ಡಿಕೆಶಿ ಜೋಡೆತ್ತು ತರ ಪಣ ತೊಟ್ಟಿದ್ದಾರೆ.. ಆದ್ರೆ ಇಲ್ಲಿ ಸಿಕ್ಕ ಯಶಸ್ಸು ದೇಶದ ರಾಜಕಾರಣದಲ್ಲಿ ಕಾಣಲು ಸಾಧ್ಯವಾಗಲೇ ಇಲ್ಲ ಈ ಪವರ್‌ಫುಲ್ ಲೀರ‍್ಸ್ಗೆ ಅನ್ನೋದೆ ನೋವಿನ ಸಂಗತಿ.ರಾಜಕಾರಣದಲ್ಲಿ ಯಾವಾಗ ಏನಾಗುತ್ತೆ ಅಂತ ಗೇಸ್ ಮಾಡೋದು ಕಷ್ಟ... ಇಲ್ಲಿ ಸೋಲು ಮತ್ತು ಗೆಲುವು ಕೂಡ ಮಮೂಲಿ.... ಅದೇಷ್ಟೆ ಪ್ರಚಂಡ ಲೀಡರ್ ಆಗಿದ್ದರೂ ಕೂಡ ಹಲವು ಮಂದಿ ಸೋತಂತ ಹಿಸ್ಟರಿ ಇದೆ. 
 
ಯೆಸ್... ಡಿಕೆಶಿ ಮತ್ತು ರಾಜ್ಯ ರಾಜಕಾರಣದಲ್ಲಿ ಗ್ಯಾರಂಟಿ ದರ್ಬಾರ್ ನಡೆಸುತ್ತಿದ್ದರೂ ಈ ಹಿಂದೆ ಎಂಪಿ ಎಲೆಕ್ಷನ್‌ನಲ್ಲಿ ಸೋಲಿನ ಕಹಿಯನ್ನು ಅನುಭವಿಸಿದ್ದಾರೆ.. ಹಾಗಾಗಿ ಲೋಕಸಭೆ ಪ್ರವೇಶಿಸಬೇಕು ಎನ್ನುವ ಆಸೆ ಇವತ್ತಿಗೂ ಕೈಗೂಡಲಿಲ್ಲ.ಎಂಪಿ ಎಲೆಕ್ಷನ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಟ್ರಬಲ್‌ಶೂಟರ್ ಡಿಕೆಶಿಗೆ ಸೋಲಾಗಿತ್ತು ಅನ್ನೋದು ಎಂದಿಗೂ ಮರೆಯಲಾಗದೇ ಉಳಿದು ಬಿಡುವ ಕಹಿ ಘಟನೆ.. ಕೊನೆಗೂ ಸಿದ್ದು ಮತ್ತು ಡಿಕೆಶಿಗೆ ಇದ್ದ ಎಂಪಿ ಆಗಬೇಕು ಎಂಬ ಆಸೆ ಈಡೇರಲೇ ಇಲ್ಲ ಆದರೆ ಈಗ ಸಿದ್ದು ಮತ್ತು ಡಿಸಿಎಂ ಡಿಕೆಶಿಗೆ ಮತ್ತೇ ಲೋಕಸಭಾ ಎಲೆಕ್ಷನ್‌ಗೆ ನಿಂತು ಗೆಲ್ಲೋದು ದೊಡ್ಡ ಕಷ್ಟವೇನಲ್ಲ.. ಮೈಸೂರಿನಿಂದ ಸಿದ್ದು ಅಖಾಡಕ್ಕೆ ಇಳಿದರೆ ಗೆಲುವು ಏನು ಮಹಾನ್ ಕಷ್ಟವಂತು ಅಲ್ಲವೇ ಅಲ್ಲ... ಅದೇ ರೀತಿಯಾಗಿ ಡಿಕೆಶಿಗೂ ಕೂಡ ಸಹೋದರ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರದಲ್ಲಿ ಅಖಾಡಕ್ಕೆ ಇಳಿದ್ರೆ, ಪ್ರಚಾರಕ್ಕೆ ಹೋಗದೆನೇ ಗೆದ್ದು ಬಿಡುವಷ್ಟು ಪ್ರಾಬಲ್ಯ ಇಟ್ಟುಕೊಂಡಿದ್ದಾರೆ.
 
ಆದರೆ ಈಗ ಡಿಕೆಶಿಗೆ ರಾಜ್ಯ ರಾಜಕಾರಣವನ್ನು ಬಿಟ್ಟು ಸಂಸತ್ತುಗೆ ಹೋಗಿ ರಾಜಕಾರಣ ಮಾಡುವ ಹುಮ್ಮಸ್ಸು ಅಂತು ಖಂಡಿತಾ ಇಲ್ಲ... ಇತ್ತ ಸಿದ್ದುಗೂ ಕೂಡ ಅದೇ ಮನಸ್ಥಿತಿ ಅವರೇ ಹೇಳಿದಾಗೆ ನೆಕ್ಸ್÷್ಟ ಎಲೆಕ್ಷನ್‌ಗೆ ಕಂಟೆಸ್ಟ್ ಮಾಡಲ್ಲ, ಚುನಾವಣಾ ರಾಜಕಾರಣದಿಂದ ನಿವೃತ್ತಿ ಆಗ್ತಿನಿ ಅಂದಿರೋವಾಗ ಡೆಲ್ಲಿಯ ಕಡೆಗಿನ ಊಸಾಬಾರಿ ಏತಕ್ಕೆ ಬೇಕು ಹೇಳಿ ಆದ್ರೆ ಇದೀಗ ಚರ್ಚೆ ಆಗ್ತಾ ಇರೋದಿಷ್ಟೇ ಈ ಹಿಂದೆ ಲೋಕಸಭೆಯ ಎಲೆಕ್ಷನ್‌ಗೆ ದುಮುಕ್ಕಿದ್ದ ಈ ಇಬ್ಬರು ನಾಯಕರು ಸೋತಿದ್ದರು.. ಕಡೆಗೆ ಸಂಸದರಾಗಬೇಕು ಅನ್ನುವ ಆಸೆ ಈಡೇರಲಿಲ್ಲ ಅನ್ನೋದಷ್ಟೇ ಸಣ್ಣ ಕೊರಗು

Share this Story:

Follow Webdunia kannada

ಮುಂದಿನ ಸುದ್ದಿ

ಅರಣ್ಯಾಧಿಕಾರಿ ಖುದ್ದು ಹಾಜರಿಗೆ ಆದೇಶ ಹೊರಡಿಸಿದ ಹೈಕೋರ್ಟ್