Select Your Language

Notifications

webdunia
webdunia
webdunia
webdunia

ನಿರ್ಮಾಣ ಹಂತದ ಕಟ್ಟಡದ ಐದನೆಯ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

The death toll fell from the fifth floor of the building
bangalore , ಶುಕ್ರವಾರ, 10 ಸೆಪ್ಟಂಬರ್ 2021 (20:55 IST)
ಬೆಂಗಳೂರು: ಕಟ್ಟಡ ನಿರ್ಮಾಣದ ನಡೆಯುತ್ತಿದ್ದ ಸ್ಥಳದಲ್ಲಿ ಲಿಫ್ಟ್ ಕ್ರೇನ್ ಚಲಾವಣೆ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕ 5ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಜೆ ಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನೆಡೆದಿರುವುದು ಬೆಳಕಿಗೆ ಬಂದಿದೆ.
 
ದಿನಗೂಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವೆಂಕಟಸ್ವಾಮಿ (46) ಬೋರ್ ಬ್ಯಾಂಕ್ ರೋಡ್ ಬಳಿ 10 ದಿನಗಳಿಂದ ಕಟ್ಟಡ ನಿರ್ಮಾಣದ ಕೆಲಸ ಮಾಡುತ್ತಿದ್ದ. ರಾಜಧಾನಿಯ ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಯ ವಹಬ್ ಗಾರ್ಡನ್ ನಲ್ಲಿ ವಾಸಿಸುತ್ತಿದ್ದ. ಐದನೇ ಮಹಡಿಯಲ್ಲಿ ಲಿಫ್ಟ್ ಕ್ರೇನ್ ಚಲಾವಣೆ ಕೆಲಸ ಮಾಡುತ್ತಿದ್ದ. ಈ ವೇಳೆ ಆಯ ತಪ್ಪಿ ಕಟ್ಟಡದ 5ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
 
ಬಿದ್ದ ಒತ್ತಡಕ್ಕೆ ದೇಹ ಇಬ್ಬಾಗವಾಗಿದೆ. ಸದ್ಯ ಮೃತ ದೇಹದ ಪೋಸ್ಟ್ ಮಾರ್ಟಮ್ ನಗರದ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನೆಡೆಯುತ್ತಿದೆ. ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಶುರುವಾಯ್ತು ಕೇರಳಾತಂಕ