Select Your Language

Notifications

webdunia
webdunia
webdunia
webdunia

ಜೆಪಿ ನಗರದ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಕರೋನಾ ನಿವಾರಣೆಗೆ ವಿಶೇಷ ಆಲಂಕಾರ ಹಾಗೂ ಪೂಜೆ

Special decoration and pooja for the Elimination of Corona at Sree Satya Ganapathi Temple in JP City
bangalore , ಶುಕ್ರವಾರ, 10 ಸೆಪ್ಟಂಬರ್ 2021 (20:17 IST)
20 ಅಡಿ ಎತ್ತರದ ಕಬ್ಬಿನ ಹಾಗೂ ತೆಂಗಿನ ಕಾಯಿ ಗಣಪತಿ ಹೀಗೆ ವಿಶೇಷ ಸಾಮಗ್ರಿಗಳನ್ನು ಬಳಸಿಕೊಂಡು ನಿರ್ಮಿಸಲಾಗುತ್ತಿದ್ದ ಮೂರ್ತಿಗಳು ದೇಶ – ವಿದೇಶದ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದವು. ಆದರೆ, ಕರೋನಾ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಕಳೆದರೆಡು ವರ್ಷಗಳಿಂದ ಸರಳವಾಗಿ ಆಲಂಕಾರವನ್ನು ಮಾಡಲಾಗುತ್ತಿದೆ. ಈ ಬಾರಿ ಮುಸುಕಿನ ಜೋಳ, ಹೂವುಗಳು ಹಾಗೂ ಸೊಪ್ಪುಗಳನ್ನು ಬಳಸಿಕೊಂಡು ವಿಶೇಷ ಆಲಂಕಾರ ಮಾಡಲಾಗಿದೆ. ಅಲ್ಲದೆ, ಕರೋನಾ ಮಹಾಮಾರಿ ಆದಷ್ಟು ಬೇಗ ನಿವಾರಣೆ ಆಗಲಿ ಎಂದು ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಅಲ್ಲದೆ, ಇದೇ ಸಂಧರ್ಭದಲ್ಲಿ ಉಚಿತ ಲಸಿಕೆಯನ್ನು ನೀಡುವ ಕಾರ್ಯಕ್ಕೂ ಚಾಲನೆ ನೀಡಲಾಗಿದ್ದು, ಒಂದು ತಿಂಗಳುಗಳ ಕಾಲ ದೇವಸ್ಥಾನದಲ್ಲಿ ಉಚಿತ ಲಸಿಕೆಯನ್ನು ನೀಡಲಾಗುವುದು ಎಂದು ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್‌ನ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. 
ganesha

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿರುವ ಬಗ್ಗೆ