Select Your Language

Notifications

webdunia
webdunia
webdunia
webdunia

SSLC ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕ ಸಾವು

SSLC ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕ ಸಾವು
ಶಿವಮೊಗ್ಗ , ಬುಧವಾರ, 15 ಜುಲೈ 2020 (17:03 IST)
SSLC ಮೌಲ್ಯಮಾಪನ ಮಾಡುವಾಗ ಶಿಕ್ಷಕರೊಬ್ಬರು ಸಾವನ್ನಪ್ಪಿದ್ದಾರೆ.

ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಎಸ್ ಎಸ್ ಎಲ್ ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರದಲ್ಲಿ ಮಧ್ಯಾಹ್ನ ಹೃದಯಾಘಾತದಿಂದ ಶಿಕ್ಷಕ ಮೃತಪಟ್ಟಿದ್ದಾರೆ.

ಭದ್ರಾವತಿ ಈಶ್ವರಪ್ಪ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಕುಮಾರ್ (48) ಮೃತಪಟ್ಟವರು. ಮಧ್ಯಾಹ್ನ ಊಟ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದರು.

ಇತರೆ ಶಿಕ್ಷಕರು ಕೂಡಲೆ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟೊತ್ತಿಗಾಗಲೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಸೇನಾ ಅಧಿಕಾರಿಗಳಿಗೆ ಫೇಸ್ ಬುಕ್ ಶಾಕ್