Select Your Language

Notifications

webdunia
webdunia
webdunia
webdunia

ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ದಂಪತಿ

The couple who were targeting
bangalore , ಮಂಗಳವಾರ, 5 ಅಕ್ಟೋಬರ್ 2021 (21:13 IST)
ಬೆಂಗಳೂರು: ಜಾಮೀನಿನ ಮೇಲೆ ಹೊರಬಂದು ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ದಂಪತಿಯನ್ನು ಆರ್‌.ಟಿ. ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 8.5 ಲಕ್ಷ ರೂ. ಮೌಲ್ಯದ 193 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ.
ಬಾಬು ಹಾಗೂ ಜಯಂತಿ ಬಂಧಿತ ಆರೋಪಿಗಳು. 
ದಂಪತಿ ಬೆಂಗಳೂರು ಮೂಲದವರಾಗಿದ್ದು, ಪತಿ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದ. ಕಳೆದ ತಿಂಗಳು ಆರ್‌.ಟಿ. ನಗರ ಠಾಣಾ ವ್ಯಾಪ್ತಿಯ ಮಂಜುನಾಥ್ ನಗರದ ಮನೆಯೊಂದರಲ್ಲಿ ಬೀಗ ಹಾಕಿದ ಮನೆಯನ್ನು ಗುರಿಯಾಗಿಸಿಕೊಂಡು ದಂಪತಿ ಕಳ್ಳತನ ಮಾಡಿದ್ದರು. ಈ ಸಂಬಂಧ ಮ‌ನೆ ಮಾಲೀಕರು ದೂರು ನೀಡಿದ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಲಾಕಿವೋರ್ವ 1.9 ಲಕ್ಷ ರೂ. ಮೌಲ್ಯದ 2 ಲ್ಯಾಪ್‌ಟಾಪ್ ಕಳವು ಮಾಡಿ ಪರಾರಿ