Select Your Language

Notifications

webdunia
webdunia
webdunia
webdunia

ಕೇಂದ್ರದ ವಿರುದ್ಧ ರಾಜಧಾನಿಯಲ್ಲಿಂದು ಕಬ್ಬು ಬೆಳೆಗಾರರ ಆಕ್ರೋಶ..!

webdunia
bangalore , ಮಂಗಳವಾರ, 5 ಅಕ್ಟೋಬರ್ 2021 (21:05 IST)
ಇಂದು ರಾಜಧಾನಿಯಲ್ಲಿ ಅನ್ನದಾತರು ಕೇಂದ್ರ ಸರ್ಕಾರದ ವಿರುದ್ಧ ‌ಆಕ್ರೋಶ ಹೊರ ಹಾಕಿದ್ರು. ಪೋಲಿಸರು ಮತ್ತು ಭೂತಾಯಿ‌ ಮಕ್ಕಳ ನಡುವೆ ತಳ್ಳಾಟ ನೂಕಾಟ.. ಸಚಿವರು ಬರೋವರೆಗೆ ರೋಡ್ ಬಿಟ್ಟು ಕದಲೋದಿಲ್ಲ ಎಂದು ನಡು ರೋಡಲ್ಲಿ ಕುಳಿತಿದ್ರು.. ಸರ್ಕಾರದ ವಿರುದ್ಧ ಕಬ್ಬು ಬೆಳೆಗಾರರು ಕೆಂಡಮಂಡಲಾಗಿದ್ರು.. ನಾವು ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕು ಎಂದು ಸರ್ಕಾರದ ವಿರುದ್ಧ ಬೆಂಕಿಯ ಉಂಡೆಗಳನ್ನು ಉಗುಳಿದರು. ಕೇಂದ್ರ ಬಿಜೆಪಿ ಕಳೆದ ಎರಡು ವರ್ಷಗಳಲ್ಲಿ ಒಂದು ಕ್ವಿಂಟಾಲ್ ಕಬ್ಬಿಗೆ (ಎಫ್ಆರ್ಪಿ ದರ) ಕೇವಲ 50 ರುಪಾಯಿ ಏರಿಕೆ ಮಾಡಿದೆ ಅದನ್ನು 350 ರುಪಾಯಿ ಏರಿಕೆ ಮಾಡಬೇಕು ಎಂದು ಇಂದು ರಾಜ್ಯದ ಮೂಲೆ ಮೂಲೆಗಳಿಂದ ಕಬ್ಬು ಬೆಳೆಗಾರರು ಕ್ರಾಂತಿವೀರ ಸಂಗೊಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ರು ಒಂದು ಗಂಟೆಗಳ ಕಾಲ ರೈಲ್ವೆ ಸ್ಟೇಷನ್ ಆವರಣದಲ್ಲಿ ಪ್ರತಿಭಟನೆ ಮಾಡಿದ್ರು.. ನಂತರ ಅಲ್ಲಿಂದ 12 ಗಂಟೆ ಸುಮಾರಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರ್ಯಾಲಿ ಮೂಲಕ ಹೊರಟರು ಈ ವೇಳೆ ರೈಲ್ವೆ ಸ್ಟೇಷನ್ ನಲ್ಲಿ ವಾಹನ ಸವಾರರು ಟ್ರಾಫಿಕ್ ಜಾಮ್ ಸಿಲುಕಿದ್ರು ಸರ್ಕಾರ ಕ್ಕೆ ಹಿಡಿ ಶಾಪ ಹಾಕಿ ನಿಂತಲೇ ನಿಂತಿದ್ರು.. ನಂತರ ರ್ಯಾಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಫ್ಲೈ ಓವರ್ ಮೇಲೆ ಬರ್ತಿದ್ದಂತೆ ಪೊಲೀಸರು ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿ ರೇಸ್ ಕೋರ್ಸ್ ಮತ್ತು ಆನಂದ್ ರಾವ್ ಸರ್ಕಲ್ ಕಡೆ ಟ್ರಾಫಿಕ್ ಡೈವರ್ಟ್ ಮಾಡಿದ್ರು.. ರೈತರ ರ್ಯಾಲಿ ಹಿನ್ನೆಲೆಯಲ್ಲಿ ಶೇಷಾದ್ರಿ ರೋಡ್ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಿದ್ರು.. ನಂತರ ರೈತರು ಫ್ರೀಡಂ ಪಾರ್ಕ್ ಮುಂಭಾಗ ಬರ್ತಿದ್ದಂತೆ ಅಲರ್ಟ್ ಆದ ಪೊಲೀಸರು ರಸ್ತೆ ಗೆ ಅಡ್ಡಲಾಗಿ ಬ್ಯಾರಿಕೇಡ್ ಗಳನ್ನು ಹಾಕಿ ರೈತರನ್ನು ತಡೆಯಲು ಪ್ಲಾನ್ ಮಾಡಿದ್ರು.. ನಂತರ ರೈತರು ಕೃಷಿ ಸಚಿವರು ಮತ್ತು ಸಕ್ಕರೆ ಸಚಿವರು ಬರಬೇಕು ಬಂದು ನಮ್ಮ ಬೇಡಿಕೆಗಳನ್ನು ಹೀಡೆರಿಸಬೇಕು ಅಂತ ಪಟ್ಟು ಹಿಡಿದಿದ್ರು ಆದರೆ ಗಂಟೆಗಟ್ಟಲೆ ಕಾದ್ರು ಸಚಿವರು ಬರಲೇ ನಂತರ ಇದರಿಂದ ಆಕ್ರೋಶಗೊಂಡ ರೈತರು ಪೊಲೀಸರನ್ನು ತಳ್ಳಿ ನಾವು ವಿಧಾನಸೌಧಕ್ಕೆ ಹೋಗ್ತಿವಿ ಅಲ್ಲೇ ಸಚಿವರಿಗೆ ಮನವಿ ಕೊಡ್ತಿವಿ ಬಿಡಿ ಎಂದು ಕೆಂಡಮಂಡಲರಾಗಿದ್ರು.. ವಿಚಾರ ತಿಳಿದ ಕೃಷಿ ಸಚಿವ ಬಿಸಿ‌ ಪಾಟೀಲ್ ಮತ್ತು ಸಕ್ಕರೆ ಸಚಿವ ಶಂಕರ್ ಪಾಟೀಲ್ ಬಿ‌ ಇಬ್ಬರು ಸ್ಥಳಕ್ಕೆ ಬಂದು ರೈತರ ಆಕ್ರೋಶ ಶಮನಗೊಳಿಸಲು ರೋಡ್ ‌ಮೇಲೆ ಕುಳಿತಿದ್ದ ರೈತರ ಜೊತೆಗೆ ಕುಳಿತು ನಿಮ್ಮ ಬೇಡಿಕೆಗಳನ್ನು ಹೀಡೆರಿಸುತ್ತಿವಿ ಅಂತ ಭರವಸೆ ನೀಡಿದರು.ಇದರಿಂದ ಕೆರಳಿದ ರೈತರು ಕೆಲ ಕಾಲ ಕೂಗಾಡಿದ್ರು ಈ ವೇಳೆ ಮಾತನಾಡಿ ಸಕ್ಕರೆ ಸಚಿವ ಶಂಕರ್ ಪಾಟೀಲ್ ಬಿ ರೈತರಿಗೆ ಸಕ್ಕರೆ ಕಾರ್ಖಾನೆ ಗಳಿಂದ ಬರಬೇಕಿದ್ದ 42 ಕೋಟಿ  ಮೊತ್ತ ಬಿಡುಗಡೆ ಮಾಡಿಸಿದ್ದೆವೆ ರೈತರಿಗೆ ಸಮಸ್ಯೆ ಆಗಲು ಬಿಡೋದಿಲ್ಲ ಸಿಎಂ ಜೊತೆ ಮಾತಾನಾಡಿ ಬೇಡಿಕೆ ಬಗ್ಗೆ ಚರ್ಚೆ ಮಾಡ್ತಿವಿ ಅಂತ ಭರವಸೆ ನೀಡಿದರು. ಇನ್ನೂ ಸಚಿವರ ಮಾತಿನಿಂದ ತೃಪ್ತರಾಗದ ರೈತರು ನಾವು ಪ್ರತಿಭಟನೆ ಕೈಬಿಡಲ್ಲ ಸಿಎಂ ನಮಗೆ ಭರವಸೆ ನೀಡಬೇಕು ಅಲ್ಲಿಯವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಅಂತ ಪಟ್ಟು ಹಿಡಿದಿದ್ರು ನಂತರ ಪೊಲೀಸರು ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಹಾಗಾಗಿ ರಸ್ತೆಯಿಂದ ಫ್ರೀಡಂ ಪಾರ್ಕ್ ಗೆ ಬರುವಂತೆ ಮನವಿ ಮಾಡಿದ್ರು ನಂತರ ಅಲ್ಲಿಂದ ರೈತರು ಫ್ರೀಡಂ ಪಾರ್ಕ್ ಒಳಗೆ ಪ್ರತಿಭಟನೆ ಮುಂದುವರಿಸಿದ್ರು.. ಈ ವೇಳೆ ಮಾತಾನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸಚಿವರು ನಮ್ಮ ಬೇಡಿಕೆಗಳನ್ನು ಸಚಿವರ ಮುಂದೆ ಇಟ್ಟಿದ್ದೆವೆ ಎಫ್ಆರ್ಪಿ ದರ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು ಅಂತ ಕೇಳಿ ಕೊಂಡಿದ್ದೆವೆ ಸಿಎಂ ಜೊತೆಗೆ ಮಾತಾನಾಡಿ  ಬಗೆಹರಿಸುವ ಮಾತು ಕೊಟ್ಟಿದ್ದಾರೆ ಅಂದ್ರು ಸಿಎಂ ಜೊತೆಗೆ ಮಾತನಾಡಿದ  ನಂತರ ಮುಂದಿನ ನಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಿವಿ ಎಂದು ಹೇಳಿದರು.
 
 ರೈತರೇನೋ ಕಬ್ಬಿನ ಎಫ್ಆರ್ಪಿ ಬೆಲೆ ಹೆಚ್ಚಿಸಿ ಅಂತ‌ ಪಟ್ಟು ಹಿಡಿದಿದ್ರೆ ಇತ್ತ ಕೃಷಿ ಸಚಿವರು‌ ಮತ್ತು ಸಕ್ಕರೆ ಸಚಿವರು ಸಿಎಂ ಜೊತೆಗೆ ಚರ್ಚೆ ಮಾಡಿ ನಿಮ್ಮ ಬೇಡಿಕೆ ಹೀಡೆರ್ಸ್ತಿವಿ ಅಂತ ಮನವಿ ಸ್ವೀಕರಿಸಿ ತೆರಳಿದ್ರು ಇತ್ತ ರೈತರನ್ನು ಮಾತುಕತೆ ಕರೆದಿರೋ ಸಿಎಂ  ನ್ಯಾಯ ಕೊಡಿಸ್ತಾರೋ ಅಥವಾ ಕೇವಲ ಭರವಸೆ ಕೊಟ್ಟು ವಾಪಸ್ ಕಳಿಸ್ತಾರೋ ಅಂತ ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲೇ ಮೊದಲ ಯಶಸ್ವಿ “ಕೃತಕ ಹೃದಯ ಉಪಕರಣ” ತೆರವುಗೊಳೊಸಿದ ಶಸ್ತ್ರಚಿಕಿತ್ಸೆ