Select Your Language

Notifications

webdunia
webdunia
webdunia
webdunia

ಬೀದಿನಾಯಿಗಳ ವಿಚಾರವಾಗಿ ಶುರುವಾದ ವಿವಾದ

webdunia
bangalore , ಮಂಗಳವಾರ, 5 ಅಕ್ಟೋಬರ್ 2021 (20:44 IST)
ಬೀದಿನಾಯಿಗಳ ವಿಚಾರವಾಗಿ ಶುರುವಾದ ವಿವಾದದ ಸಂಬಂಧ ವಿಚಾರಣೆ ನಡೆಸಿದ ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್​ ಒಂದೇ ಕುಟುಂಬದ ಮೂವರು ಸದಸ್ಯರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಆದರೆ ವಸತಿ ಪ್ರದೇಶಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡದಂತೆ ಸೂಚನೆ ನೀಡಿದೆ. ಇದರಿಂದ ಬೀದಿ ನಾಯಿಗಳು ಆ ಸ್ಥಳದಲ್ಲಿ ಹೆಚ್ಚೆಚ್ಚು ಓಡಾಡುತ್ತವೆ ಎಂದು ಹೇಳಿದೆ.
 
ಬಲಬೀರ್​ ಕೌರ್​​ ದೂರಿನ ಪ್ರಕಾರ ಆರೋಪಿ ಮನದೀಪ್​ ಸಿಂಗ್​​ 8-9 ಬೀದಿ ನಾಯಿಗಳನ್ನು ಸಾಕಿದ್ದಾರೆ. ಇವು ರಸ್ತೆಯಲ್ಲಿ ಗಲೀಜು ಮಾಡುತ್ತವೆ . ಈ ಬಗ್ಗೆ ಗ್ರಾಮದ ಅನೇಕರು ಪರಿವಾರದ ಬಳಿ ಹೇಳಿದ್ದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ದೂರಿದ್ದರು.
 
ಇದು ಮಾತ್ರವಲ್ಲದೇ ಬೀದಿ ನಾಯಿಗಳು ತಾವು ಬೆಳೆದ ಬೆಳ್ಳುಳ್ಳಿ ಬೆಳೆಯನ್ನು ನಾಶ ಮಾಡಿವೆ. ಹಾಗೂ 2019ರ ನವೆಂಬರ್​ 24ರಂದು ಬಲಬೀರ್​ ಹಾಗೂ ಲವಲೀನ್​ ನಮ್ಮ ಮನೆಯ ಮುಂದೆ ಬಂದು ಹಲ್ಲೆ ನಡೆಸಿದ್ದಾರೆ ಹಾಗೂ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದರು.
 
ಆರೋಪಿ ಕುಟುಂಬಕ್ಕೆ ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್, ಬೀದಿ ನಾಯಿಗಳಿಗೆ ವಸತಿ ಪ್ರದೇಶಗಳಲ್ಲಿ ಆಹಾರ ನೀಡದಂತೆ ಆರೋಪಿ ಕುಟುಂಬಕ್ಕೆ ಖಡಕ್​ ಸೂಚನೆ ನೀಡಿದೆ. ಆಹಾರ ಸಿಗುವ ಜಾಗದಲ್ಲಿ ಶ್ವಾನಗಳು ಹೆಚ್ಚು ಓಡಾಡುತ್ತವೆ. ಹೀಗಾಗಿ ಯಾವುದೇ ಕಾರಣಕ್ಕೂ ಜನನಿಬಿಡ ಪ್ರದೇಶಗಳಲ್ಲಿ ಬೀದಿ ನಾಯಿಗೆ ಆಹಾರ ನೀಡುವ ಅಗತ್ಯವಿಲ್ಲ ಎಂದು ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೈಋತ್ಯ ಮುಂಗಾರು ಅಂತ್ಯವಾದರೂ ಶಾಹೀನ್ ಚಂಡಮಾರುತದ ಪ್ರಭಾವ