Select Your Language

Notifications

webdunia
webdunia
webdunia
webdunia

ಸ್ಪೀಕರ್ ಬಳಸಿ ವ್ಯಾಪಾರ ಮಾಡುತ್ತಿದ್ದವರಿಗೆ ಪೊಲೀಸರ ವಾರ್ನಿಂಗ್: 15 ಮೆಗಾ ಫೋನ್ ಸೀಜ್......

ಸ್ಪೀಕರ್ ಬಳಸಿ ವ್ಯಾಪಾರ ಮಾಡುತ್ತಿದ್ದವರಿಗೆ ಪೊಲೀಸರ ವಾರ್ನಿಂಗ್: 15 ಮೆಗಾ ಫೋನ್ ಸೀಜ್......
bangalore , ಮಂಗಳವಾರ, 5 ಅಕ್ಟೋಬರ್ 2021 (16:05 IST)
ಬೆಂಗಳೂರು: ಮೆಗಾಪೋನ್ ಬಳಸಿ ವ್ಯಾಪಾರ ಮಾಡುತ್ತಿದ್ದವರಿಗೆ ಪೂರ್ವ ವಿಭಾಗದ ಪೊಲೀಸರು ವಾರ್ನಿಂಗ್ ಕೊಟ್ಟಿದ್ದಾರೆ. ಮೆಗಾಪೋನ್ ಬಳಸಿ ವ್ಯಾಪಾರ ವಹಿವಾಟು ಮಾಡುವುದರಿಂದ ಹೆಚ್ಚು ಶಬ್ದ ಮಾಲಿನ್ಯ ಉಂಟಾಗುತ್ತದೆ, ಇದರಿಂದಾಗಿ ಜನರಿಗೆ ತೊಂದರೆ ಉಂಟಾಗುತ್ತದೆ. ಈ ಕುರಿತು ಪೊಲೀಸ್ ಆಯುಕ್ತರಿಗೆ ಮತ್ತು ಸ್ಥಳಿಯ ಠಾಣೆಗಳಿಗೆ ಸಾಕಷ್ಟು ದೂರುಗಳು ಬಂದಿದ್ದವು, ಈ ಹಿನ್ನೆಲೆಯಲ್ಲಿ ಪೂರ್ವ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳವಾರ 15 ಮೆಗಾಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
 
ಕಾರ್ಯಾಚರಣೆಯ ಹಿನ್ನಲೆ: 
 
ನಗರದಲ್ಲಿ ತರಕಾರಿ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳು ಮೆಗಾಪೋನ್ ಸ್ಪಿಕರ್ ಬಳಸಿ ವ್ಯಾಪಾರ ಮಾಡುತ್ತಿದ್ದು ಇದರಿಂದ ಹಿರಿಯ ನಾಗರಿಕರು ಹಾಗೂ ಮನೆಯಲ್ಲಿ ಆನ್ ಲೈನ್ ಕ್ಲಾಸ್ ನಲ್ಲಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ದೂರುಗಳು ಸುಮಾರು ತಿಂಗಳಿನಿಂದ ಕೇಳಿ ಬಂದಿದ್ದು ವರದಿಯಾಗಿತ್ತು.
 
ತಳ್ಳುವ ಗಾಡಿ, ಆಟೊ ಸೇರಿದಂತೆ ವಿವಿಧ ವಾಹನಗಳ ಮುಖಾಂತರ ತರಕಾರಿ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳು ಇತ್ತೀಚಿನ ದಿನಗಳಲ್ಲಿ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಮೆಗಾಪೋನ್ ಸ್ಪಿಕರ್ ಮುಖಾಂತರ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಏರಿಯಾದ ಮನೆಗಳ‌ ಮುಂದೆ ಲೋಡ್ ಸ್ಪಿಕರ್ ಮೂಲಕ ಮಾಡುತ್ತಿರುವುದರಿಂದ ಹಿರಿಯ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ವೃತ್ತಿಪರ ಉದ್ಯೋಗಿಗಳಿಗೂ ಕಿರಿಕಿರಿಯಾಗುತ್ತಿದೆ‌ ಎಂದು ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ದೂರುವವರ ಸಂಖ್ಯೆಯೂ ಹೆಚ್ಚಾಗಿತ್ತು ಎಂದು ಉಲ್ಲೇಖಿಸಲಾಗಿತ್ತು.
 
 
ಮೆಗಾಪೋನ್ ಸ್ಪಿಕರ್ ಬಳಕೆಯಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಜನವರಿಯಲ್ಲಿ 711 ಮಂದಿ ದೂರು ನೀಡಿದರೆ ಫೆಬ್ರುವರಿಯಲ್ಲಿ 650 ಮಂದಿ ದೂರು ದಾಖಲಿಸಿದ್ದರು. ಮಾರ್ಚ್‌ನಲ್ಲಿ 621 ದೂರುಗಳು ದಾಖಲಾದರೆ ಲಾಕ್ ಡೌನ್ ಅವಧಿಯಾದ ಏಪ್ರಿಲ್‌ನಲ್ಲಿ 275 ಕ್ಕೆ ದೂರು ದಾಖಲಾಗಿತ್ತು. ಮೇ ತಿಂಗಲಿನಲ್ಲಿ 136 ಮತ್ತು ಜೂನ್ ನಲ್ಲಿ 186 ಕ್ಕೆ ಇಳಿದಿದ್ದರೆ ಜುಲೈನಲ್ಲಿ ಈ ಸಂಖ್ಯೆ 250ಕ್ಕೆ ಸಿಮೀತವಾಗಿತ್ತು. ಆಗಸ್ಟ್ ನಲ್ಲಿ 484 ದೂರುಗಳ ದಾಖಲಾಗಿದ್ದವು ಎನ್ನಲಾಗಿತ್ತು. 
 
 
ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡುವ ಸಾರ್ವಜನಿಕರು ಮನೆ ಬಳಿ ಬೆಳಗ್ಗಿನ ಅವಧಿಯಲ್ಲಿ ಲೌಡ್ ಸ್ಪೀಕರ್ ಮೂಲಕ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಮೆಗಾ ಪೋನ್ ಬಳಸದಂತೆ ಅಥವಾ ಶಬ್ಧ ಕಡಿಮೆ ಮಾಡುವಂತೆ ಮನವಿ ಮಾಡಿದರೂ  ನಮ್ಮ ಮಾತನ್ನು ಕೇಳುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ತೊಂದರೆಯಾಗಲಿದೆ ‌ನಾಗರಿಕರು ದೂರಿದ್ದರು.
 
ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್, ಕರ್ನಾಟಕ ಪೊಲೀಸ್ ಕಾಯ್ದೆ 92ರ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮೆಗಾಪೋನ್ ಅಥವಾ ಲೋಡ್ ಸ್ಪಿಕರ್ ಮೂಲಕ  ಬಳಸುವುದು ಅಪರಾಧ‌. ಅಲ್ಲದೆ‌ ಮೆಗಾಪೋನ್ ಬಳಸುವ ಮುನ್ನ ಅನುಮತಿ ಪಡೆಯಬೇಕು. ಸಣ್ಣ ವ್ಯಾಪಾರಿಗಳು ಲೋಡ್  ಸ್ಪಿಕರ್ ಹಾಕಿಕೊಂಡು ವ್ಯಾಪಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ‌. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು.
 
ಕೆಲ ವರ್ಷಗಳ ಹಿಂದೆ ನಮಗೆ ಯಾವುದೇ ರೀತಿಯ ಮೆಗಾಪೋನ್ ಅಥವಾ ಲೋಡ್ ಸ್ಪಿಕರ್ ಗಳ ಅಗತ್ಯವಿರಲಿಲ್ಲ. ಕೊರೊನಾ ಬಿಕ್ಕಟ್ಟು ಬಳಿಕ ಇದರ ಅವಶ್ಯಕತೆ ಹೆಚ್ಚಾಗಿದೆ. 1000 ರಿಂದ 1500 ರೂಪಾಯಿ ಮೆಗಾಪೋನ್ ಖರೀದಿಸಿ ವಾಯ್ಸ್ ರೆಕಾರ್ಡ್ ಮಾಡಿ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತೇವೆ. ಅಲ್ಲದೆ ಅಪಾರ್ಟ್ ಮೆಂಟ್ ಗಳ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಗ್ರಾಹಕರಿಗೆ ತಲುಪುವ ಉದ್ದೇಶದಿಂದ ಮೆಗಾಪೋನ್ ಬಳಸುತ್ತೇವೆ  ಸಣ್ಣ ವ್ಯಾಪಾರಿಗಳು ಸಮಜಾಯಿಷಿ ನೀಡಿದ್ದರು.
 
ಬೆಳಗ್ಗಿನ ಅವಧಿಯಲ್ಲಿ ಕಸ ಸಂಗ್ರಹಿಸುವ ಬಿಬಿಎಂಪಿ ಸಿಬ್ಬಂದಿ ಸಹ ‌ಮೆಗಾಪೋನ್ ಬಳಸಿ ಮನೆಗಳ ಬಳಿ ಕಸ ಸಂಗ್ರಹಿಸುತ್ತಿರುವುದು ಗಮನಕ್ಕೆ ಬಂದಿತ್ತು. ಬಹುತೇಕ‌ ಕಸ ಸಂಗ್ರಹಿಸುವ ಗುತ್ತಿಗೆದಾರರು ಮೆಗಾಪೋನ್ ಬಳಕೆಗೆ ಅನುಮತಿಯೇ ಪಡೆದಿರುವುದಿಲ್ಲ. ಇದರಿಂದ ಕಿರಿಕಿರಿಯಾಗುತ್ತಿದೆ ಸಾರ್ವಜನಿಕರು ಪ್ರತಿಯಾಗಿ ದೂರಿದ್ದರು.
 
ಮಾನವೀಯ ಆಧಾರದ ಮೇಲೆ ತಮ್ಮ ಹೊಟ್ಟೆಪಾಡಿಗಾಗಿ ಸಣ್ಣ ವ್ಯಾಪಾರಿಗಳು ಮೆಗಾಪೋನ್ ಬಳಸಿ ವ್ಯಾಪಾರ ಮಾಡಿದರೂ ಕಾನೂನು ದೃಷ್ಟಿಕೋನದಲ್ಲಿ‌ ಮೆಗಾಪೋನ್ ಬಳಸುವುದು ಅಪರಾಧವಾಗಿದೆ‌. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೂ ತೊಂದರೆಯಾಗದಂತೆ ವ್ಯಾಪಾರಿಗಳು ಕೆಲ ನಿಯಮಗಳು ಪಾಲಿಸಿದರೆ ಯಾರಿಗೂ ತೊಂದರೆಯಾಗುವುದಿಲ್ಲ. ಈ ಕೆಳಗಿನ ಕ್ರಮಗಳನ್ನು ವ್ಯಾಪಾರಿಗಳು ಪಾಲಿಸಬೇಕಿದೆ ಎಂದು ಪೊಲೀಸರು ಕೆಲ ಮನವಿಗಳನ್ನು ಪೊಲೀಸರು ಮಾಡಿದ್ದರು.
 
*ಕರ್ಕಶ ರೀತಿ ಶಬ್ಧ ಉಂಟಾಗುವ ಅಥವಾ ಕಿರಿಕಿರಿಯಾಗುವ ಹಾಗೇ‌ ಮೆಗಾಪೋನ್ ಸ್ಪಿಕರ್ ಗಳನ್ನ ಬಳಸಬೇಡಿ.
 
* ವ್ಯಾಪಾರ ವೇಳೆ ನಿಯಮಿತವಾಗಿ ಮೆಗಾಪೋನ್ ಅಥವಾ ಇನ್ನಿತರ ಸಾಧನ ಬಳಸಿ
 
* ಶಾಲಾ-ಕಾಲೇಜು, ಆಸ್ಪತ್ರೆಗಳ ಬಳಿ ಮೆಗಾಪೋನ್ ಬಳಸಬೇಡಿ
 
*ಅನಗತ್ಯ ಕಿರಿಕಿರಿಯಿಂದ ಯಾರಾದರೂ ಅಫ್ ಮಾಡಲು ಯಾರಾದರೂ‌ ಸೂಚಿಸಿದರೆ ತಕ್ಷಣವೇ ಆಫ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಪ್ರದೇಶದಲ್ಲಿ ರಾಮ ರಾಜ್ಯವಿಲ್ಲ,ಕೊಲೆಗಡುಕ ಸರ್ಕಾರವಿದೆ: ಮಮತಾ ಬ್ಯಾನರ್ಜಿ