Select Your Language

Notifications

webdunia
webdunia
webdunia
webdunia

ಸಿಸಿಬಿ ಪೊಲೀಸರ ಬಲೆಗೆ ಕಿಲಾಡಿ ಜೋಡಿ

The couple is caught in the trap of CCB police
bangalore , ಶನಿವಾರ, 3 ಡಿಸೆಂಬರ್ 2022 (20:22 IST)
ಅವನು ಜಗತ್ತು ಕಂಡ ಕುಖ್ಯಾತ ಡ್ರಗ್ ಮಾಫಿಯಾ ಕಿಂಗ್ ಪಿನ್.ಕೊನೆಗೆ ಅದೇ ಕಾರಣದಿಂದ ಆತನ ಅಂತ್ಯವಾಗಿದ್ದು ಈಗ ಇತಿಹಾಸ. ಆದ್ರೆ ಇಂದಿಗೂ ಆತ ಕೆಲ ಮಾದಕ ದಂಧೆಕೋರರಿಗೆ ಸ್ಪೂರ್ತಿ ಅಂದ್ರೆ ನೀವು ನಂಬಲೇಬೇಕು. ಅಂತದ್ದೊಂದು ವಿಚಿತ್ರ ದಂಧೆಕೋರ ಜೋಡಿ ಸದ್ಯ ಪೊಲೀಸರ ಕೈಗೆ ಸಿಕ್ಕಿದೆ.
 
ಮೂಲತಃ ಕೇರಳದ ಟ್ಯಾಟೂ ಆರ್ಟಿಸ್ಟ್. ಹೆಸ್ರು ವಿಷ್ಣುಪ್ರಿಯ ಹಾಗೂ ಸಿಗಿಲ್ ವರ್ಗೀಸ್.
ಚಂದಾಪುರ ಬಳಿ ಫ್ಲ್ಯಾಟ್ ಒಂದರಲ್ಲಿ ಲಿವಿಂಗ್ ಟುಗೆದರ್ ನಲ್ಲಿ ವಾಸವಿದ್ದ ಇಬ್ಬರೂ ಕಲಿತ ವಿದ್ಯೆಗೆ ತಕ್ಕ ವೃತ್ತಿ ಮುಂದುವರೆಸೋದು ಬಿಟ್ಟು ಕೊಲಂಬಿಯಾದ ಡ್ರಗ್ ಮಾಫಿಯಾ ಕಿಂಗ್ ಪಿನ್ ಪಾಬ್ಲೋ ಎಸ್ಕೋಬಾರ್ ನಂತೆ ಮಾದಕ ಜಗತ್ತಿನಲ್ಲಿ ತಮ್ಮದೇ  ಮಾಫಿಯಾದಲ್ಲಿ ಮೆರೆದಾಡುವ ಯೋಜನೆ ಹಾಕ್ಕೊಂಡಿದ್ರು. ಆದ್ರೆ ಸಿಸಿಬಿಯ ಮಾದಕ ವಸ್ತು ನಿಗ್ರಹ ದಳದ ಪೊಲೀಸರು ಬರೋಬ್ಬರಿ 25 ಲಕ್ಷ ಮೌಲ್ಯದ ಎಂಡಿಎಂಎ, ಎಲ್ಎಸ್ಡಿ ಸಹಿತ ಇಬ್ಬರನ್ನೂ ಬಂಧಿಸಿ ಕಂಬಿ ಹಿಂದೆ ಕಳಿಸಿದ್ದಾರೆ.
 
ಮಾದಕ ಸರಬರಾಜು ದಂಧೆಯಲ್ಲಿ ಫೇಸ್ ಲೆಸ್ ರಷ್ಯನ್ ಟ್ರೆಷರ್ ಹಂಟ್ ಮಾದರಿ ಅನುಸರಿಸುತ್ತಿದ್ದ ಆರೋಪಿಗಳು ಆನ್‌ಲೈನ್‌ ಮೂಲಕ ಗಿರಾಕಿಗಳಿಂದ ಹಣ ಪಡೆದು ಮಾದಕವನ್ನ ಯಾವುದಾದರೂ ಸ್ಥಳದಲ್ಲಿಟ್ಟು ಲೊಕೇಶನ್ ಕಳಿಸುತ್ತಿದ್ರು. ಡೀಲರ್ ಯಾರು, ನೋಡೋಕೆ ಹೇಗಿದ್ದಾನೆ ಅನ್ನೋದೇ ಗಿರಾಕಿಗೆ ಗೊತ್ತಾಗ್ತಿರ್ಲಿಲ್ಲ.ಹದಿನೈದು ದಿನಗಳ ಹಿಂದೆ ಇಬ್ಬರನ್ನೂ ಬಂಧಿಸಿದ್ದ ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಐದು ಲಕ್ಷ ಮೌಲ್ಯದ ಮಾದಕ ಪದಾರ್ಥಗಳನ್ನ ವಶಪಡಿಸಿಕೊಂಡಿದ್ರು. ಆದ್ರೆ ಬಳಿಕ ಪ್ರಕರಣವನ್ನ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಆರೋಪಿಗಳನ್ನ ಹೆಚ್ಚಿನ ವಿಚಾರಣೆ ನಡೆಸಿ ಅವರ ಫ್ಲ್ಯಾಟ್ ನಲ್ಲಿ ಪರಿಶೀಲನೆ ನಡೆಸಿದಾಗ ಪಾಬ್ಲೋ ಎಸ್ಕೋಬಾರ್ ನಿಂದ ಸ್ಪೂರ್ತಿ ಪಡೆದ ಕಥೆ ಬಯಲಾಗಿದೆ.
 
ಸದ್ಯ ಆರೋಪಿಗಳ ಮನೆಯಲ್ಲಿ 25 ಲಕ್ಷ ಮೌಲ್ಯದ ವಿವಿಧ ಮಾದಕ ಪದಾರ್ಥ, ಡೈರಿ, ಹಾಗೂ ಪಾಬ್ಲೋ ಎಸ್ಕೋಬಾರ್ ಫೋಟೋವನ್ನ ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನೂ‌ ಕಂಬಿ ಹಿಂದೆ ಕಳಿಸಿದ್ದಾರೆ. ಒಳ್ಳೆಯದರಿಂದ ಸ್ಪೂರ್ತಿ ಪಡೆಯೋದು ಬಿಟ್ಟು ಜಗತ್ತು ಕಂಡ ಕುಖ್ಯಾತನಿಂದ ಸ್ಪೂರ್ತಿ ಪಡೆದವರು ಸದ್ಯ ಜೈಲಿನಲ್ಲಿ ಮುದ್ದೆ ಮುರೀತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಸಹ ಭಗವದ್ಗೀತೆ ಓದುತ್ತೇನೆ- ಸಿಎಂ