Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಆರೋಪಗಳಲ್ಲಿ ಧಮ್ ಇಲ್ಲ- ಅರುಣ್ ಸಿಂಗ್

There is no truth in Congress' allegations
bangalore , ಶನಿವಾರ, 3 ಡಿಸೆಂಬರ್ 2022 (18:40 IST)
ಅಭ್ಯರ್ಥಿಗಳ‌ ಆಯ್ಕೆಗೆ ಗುಜರಾತ್ ಮಾಡೆಲ್ ಅನುಸರಿಸುವ ವಿಚಾರವಾಗಿ ಅರುಣ್ ಸಿಂಗ್ ಪ್ರತಿಕ್ರಿಯಿಸಿದ್ದು,ಅಭ್ಯರ್ಥಿಗಳ ಆಯ್ಕೆಗೆ ಕೇಂದ್ರೀಯ ಚುನಾವಣಾ ಸಮಿತಿ ನಿರ್ಧರಿಸಲಿದೆ.ಚುನಾವಣಾ ಸಮಿತಿ ಸರಿಯಾದ ನಿರ್ಧಾರ ಕೈಗೊಳ್ಳಲಿದೆ.ನಮ್ಮ ಕಾರ್ಯಕರ್ತರಲ್ಲಿ ಗೆಲ್ಲುವ ವಿಶ್ವಾಸ ಮೂಡಿದೆ.ಜನರಲ್ಲೂ ಬಿಜೆಪಿ ಪರ ಒಲವು ಇದೆ.ಮತ್ತೆ ಬಿಜೆಪಿ ಗೆಲ್ಲಿಸಲು ಜನ ನಿರ್ಧರಿಸಿದ್ದಾರೆ ಎಂದು ಅರಣ್ ಸಿಂಗ್ ಹೇಳಿದ್ದಾರೆ.
 
ಬಿಜೆಪಿಯಲ್ಲಿ ರೌಡಿ ರಾಜಕಾರಣ ವಿಚಾರವಾಗಿ ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರು ಇದರ ಬಗ್ಗೆ ಸ್ಪಷ್ಟ ಪಡಿಸಿದ್ಧಾರೆ.ನಮ್ಮ ಪಕ್ಷಕ್ಕೆ ಯಾವುದೇ ರೌಡಿ ಶೀಟರ್ ಸೇರ್ಪಡೆ ಮಾಡ್ಕೊಳ್ತಿಲ್ಲ.ಫೈಟರ್ ರವಿ ಸೇರ್ಪಡೆ ಬಗ್ಗೆ ರಾಜ್ಯಾಧ್ಯಕ್ಷರೇ ಮಾತಾಡ್ತಾರೆ.ಕಾಂಗ್ರೆಸ್ ನವ್ರು ವಿವಾದ ಇಲ್ಲದಿದ್ರೂ ವಿವಾದ ಮಾಡ್ತಿದಾರೆ.ಕಾಂಗ್ರೆಸ್ ಗೆ ನಮ್ಮ ವಿರುದ್ಧ ಯಾವುದೇ ಅಜೆಂಡಾ ಸಿಕ್ತಿಲ್ಲ.ಕಾಂಗ್ರೆಸ್ ಆರೋಪಗಳಲ್ಲಿ ಧಮ್ ಇಲ್ಲ.ರಾಹುಲ್‌ ಗಾಂಧಿ ಹೋದ ಕಡೆಯೆಲ್ಲ ಕಾಂಗ್ರೆಸ್ ಸೋಲ್ತಿದೆ.ಚಾಮರಾಜನಗರಕ್ಕೆ ರಾಹುಲ್ ಬಂದು ಹೋದಮೇಲೆ ಅಲ್ಲಿನ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲ್ತು ಎಂದು ಕಾಂಗ್ರೆಸ್ ಮೇಲೆ ಅರುಣ್ ಸಿಂಗ್ ಆರೋಪ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೀನುಗಾರರಿಂದ ಡಾಲ್ಫಿನ್ ರಕ್ಷಣೆ