Select Your Language

Notifications

webdunia
webdunia
webdunia
webdunia

ವೋಟರ್ ಲಿಸ್ಟ್ ಹಿಡಿದು ಮನೆ ಮನೆ ಸರ್ವೇ ಮಾಡ್ತಿದ್ದ ಇಬ್ಬರ ಬಂಧನ

Arrest of two people who were doing house to house survey with voter list
bangalore , ಶನಿವಾರ, 3 ಡಿಸೆಂಬರ್ 2022 (19:11 IST)
ಬೆಂಗಳೂರಿನಲ್ಲಿ ವೋಟರ್ ಐಡಿ ದುರ್ಬಳಕೆ ಆರೋಪ ಕೇಳಿಬರುತ್ತಿದ್ದು ,ಇದರ ಬೆನ್ನೇಲೆ ಇದೀಗ ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದ ಇಬ್ಬರನ್ನ ಸ್ಥಳೀಯರು ಹಿಡಿದಿದ್ದಾರೆ.
 
ಶ್ಯಾಮ್ ,ಗೋಪಿಯನ್ನ ಮಾಜಿ ಕಾರ್ಪೋರೇಟರ್ ವೆಂಕಟೇಶ್  ಹಿಡಿದಿದ್ದಾರೆ. ಯಶವಂತಪುರ ಬಿ.ಕೆ.ನಗರ 8 ನೇ ಕ್ರಾಸ್   ಮನೆ ಸರ್ವೆ ಮಾಡ್ತಿದ್ದು ,ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಮತದಾರರ ಕುಟುಂಬ ಸದಸ್ಯರ ಮಾಹಿತಿ ಇಟ್ಟುಕೊಂಡು ಓಡಾಟ ನಡೆಸಿದ್ರು.ಮಾಹಿತಿ ಪುಸ್ತಕದಲ್ಲಿ ಸಂಸದ ಡಿ.ಕೆ.ಸುರೇಶ್ ಹಾಗೂ ಆರ್.ಆರ್.ನಗರ ಪರಿಚಿತ ಅಭ್ಯರ್ಥಿ ಕುಸುಮ ಹೆಚ್.ಪೋಟೋ ಇತ್ತು.ಬಿಬಿಎಂಪಿ ಬಳಿ ಇಲ್ಲದ ವೋಟರ್ ಲಿಸ್ಟ್ ಪತ್ತೆಯಾಗಿದ್ದು,ಇದುವರೆಗೂ ನಮಗೆ ಸಿಕ್ಕದ ವೋಟರ್ ಐಡಿ ಪತ್ತೆ ಎಂದು ವೆಂಕಟೇಶ್ ಆರೋಪ ಮಾಡಿದ್ದಾರೆ.ಚಾಣಕ್ಯ ಎಂದು ನಾಮಕರಣ ಮಾಡಿರೋ ಹೊಸ ವಾರ್ಡ್ ನ ವೋಟರ್ ಲಿಸ್ಟ್ ನಲ್ಲಿ 1187 ವೋಟರ್ ಐಡಿ ಲಿಸ್ಟ್ ಬುಕ್ ಪತ್ತೆ ಎಂದು ಬಿಜೆಪಿ ನಾಯಕ ಆರೋಪ ಮಾಡಿದ್ದಾರೆ.ಇದೀಗ ಅಕ್ರಮವಾಗಿ ಮತಾದರರ ಮಾಹಿತಿ ಕಲೆ ಹಾಕುತ್ತಿದ್ದ ಆರೋಪದಾಡಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಇಬ್ಬರು ಯುವಕರ ವಿಚಾರಣೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಆರೋಪಗಳಲ್ಲಿ ಧಮ್ ಇಲ್ಲ- ಅರುಣ್ ಸಿಂಗ್