Select Your Language

Notifications

webdunia
webdunia
webdunia
webdunia

ನಟಿ ಕಂಗನಾ ಕೆನ್ನೆಗೆ ಬಾರಿಸಿದ್ದ ಕಾನ್ಸ್‌ಸ್ಟೇಬಲ್ ಬೆಂಗಳೂರಿಗೆ ವರ್ಗಾವಣೆ

ನಟಿ ಕಂಗನಾ ಕೆನ್ನೆಗೆ ಬಾರಿಸಿದ್ದ ಕಾನ್ಸ್‌ಸ್ಟೇಬಲ್ ಬೆಂಗಳೂರಿಗೆ ವರ್ಗಾವಣೆ

Sampriya

ಬೆಂಗಳೂರು , ಬುಧವಾರ, 3 ಜುಲೈ 2024 (19:13 IST)
Photo Courtesy X
ಬೆಂಗಳೂರು: ಜೂನ್ 6 ರಂದು ಚಂಡೀಗಢ ಎಸ್‌ಬಿಎಸ್‌ಐ ಏರ್‌ಪೋರ್ಟ್‌ನಲ್ಲಿ ಹಿಮಾಚಲ ಪ್ರದೇಶದ ಮಂಡಿ ಸಂಸದೆ ಕಂಗನಾ ರಣಾವತ್ ಅವರ ಕೆನ್ನೆಗೆ ಬಾರಿಸಿ ಸುದ್ದಿಯಾಗಿದ್ದ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಅದಲ್ಲದೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿಯಾಗಿರುವ ಕುಲ್ವಿಂದರ್ ಕೌರ್ ಅವರ ಪತಿಯನ್ನೂ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

 ದೆಹಲಿಗೆ ವಿಮಾನ ಹತ್ತಲು ಹೋಗುತ್ತಿದ್ದಾಗ ನಟಿ ಕಂಗನಾ ಅವರಿಗೆ ಕಪಾಳಮೋಕ್ಷ ಮಾಡಿದ ಆರೋಪದಲ್ಲಿ ಜೂನ್ 7 ರಂದು ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಕೌರ್ ವಿರುದ್ಧ ಐಪಿಸಿಯ ಸೆಕ್ಷನ್ 323 ಮತ್ತು 341 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.

ಮೊಹಾಲಿ ಎಸ್‌ಪಿ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದ ತನಿಖೆ ನಡೆಸುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಡಾ ನಿವೇಶನ ಹಂಚಿಕೆ ಪ್ರಕರಣ ಸಿಬಿಐಗೆ ನೀಡುವ ಬಗ್ಗೆ ಸಿಎಂ ಏನಂದ್ರು ಗೊತ್ತಾ