Daily Horoscope

Select Your Language

Notifications

webdunia
webdunia
webdunia
webdunia

ರಾಜ್ಯಪಾಲರ ಮೂಲಕ ಕಾಂಗ್ರೆಸ್ ಸರ್ಕಾರ ತಪ್ಪು ಮಾಹಿತಿ ನೀಡಿದೆ- ಜಿ.ಡಿ ದೇವೇಗೌಡ

 ಜಿ.ಡಿ ದೇವೇಗೌಡ
ಬೆಂಗಳೂರು- ನಗರದಲ್ಲಿ ಮಾಜಿ ಸಚಿವ ಜಿ ಟಿ ದೇವೇಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು,ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಮೂಲಕ ಬಹಳ ತಪ್ಪು ಮಾಹಿತಿ ಜನರಿಗೆ ಕೊಟ್ಟಿದ್ದಾರೆ.ಎಸ್ ಸಿ ಎಸ್ ಟಿ ಗೆ 30 ಸಾವಿರ ಕೋಟಿ ಕೊಟ್ಟಿದ್ದೀವಿ ಅಂತಾ ಸುಳ್ಳು ಹೇಳಿದ್ದಾರೆ.ಜಲಜೀವನ್, ನರೇಗಾ ಇವೆಲ್ಲಾ ಕೇಂದ್ರ ಸರ್ಕಾರ ಮಾಡೋದು ಕೇಂದ್ರ ಸರ್ಕಾರವನ್ನ ಟೀಕೆ ಮಾಡಿದ್ದಾರೆ ಹೊರತು ಕೇಂದ್ರ ಸರ್ಕಾರದ ಯೋಜನೆಗಳನ್ನ ಹೇಳಿಲ್ಲ.ಐದು ಗ್ಯಾರಂಟಿಗಳ ಬಗ್ಗೆಯಷ್ಟೇ ಹೇಳಿದ್ದಾರೆ.ಹೊಸತೇನೂ ಇಲ್ಲ.ಅನುದಾನ ಖಾಲಿಯಾಗಿದೆ, ಕೇಂದ್ರದ ಮೇಲೆ ಹೇಳೋದನ್ನ ಪರಿಪಾಠ ಮಾಡಿಕೊಂಡಿದ್ದಾರೆ.ಕೇಂದ್ರದಿಂದ ಏನ್ ಕೊಡಬೇಕೋ ಕೊಡ್ತಾರೆ.ಬರ ಪರಿಹಾರ ಎರಡು ಸಾವಿರ ಇನ್ನೂ ರೈತರಿಗೆ ತಲುಪಿಸಿಲ್ಲ ಎಂದು ಕೇಂದ್ರದ ಕಡೆ ಬೆರಳು ತೋರಿಸೋದು ಸರಿಯಲ್ಲ ಎಂದು ಜಿ.ಟಿ ದೇವೇಗೌಡ ಹೇಳಿದ್ದಾರೆ.
 
ಇನ್ನೂ ಅಮಿತ್ ಶಾ ಮೀಟಿಂಗ್ ವಿಚಾರವಾಗಿ ಮೈತ್ರಿ ವಿಚಾರ ಹೈಕಮಾಂಡ್ ತೀರ್ಮಾನ ಅಂತಾ ಹೇಳಿದ್ದಾರೆ.ಸೀಟು ಹಂಚಿಕೆ ಬಗ್ಗೆ ಅಪಸ್ವರ ಎತ್ತಬಾರದು ಅಂತಾ ಹೇಳಿದ್ದಾರೆ.ನಾವೆಲ್ಲರೂ ಒಟ್ಟಾಗಿದ್ದೇವೆ.ಬಿಎಸ್ ವೈ, ಅಶೋಕ್ ಸೇರಿ ಬಹಳ ಮಂದಿ ನಾಯಕರು ಬಿಜೆಪಿಯಲ್ಲಿದ್ದಾರೆ.ದೇವೇಗೌಡ್ರು, ಕುಮಾರಸ್ವಾಮಿ ಜೆಡಿಎಸ್ ನಲ್ಲಿ ಅವ್ರು ತೀರ್ಮಾನ ಮಾಡ್ತಾರೆ.ನಾವ್ಯಾರೂ ರೆಕಮಂಡ್ ಮಾಡೋಕೆ ಹೋಗಲ್ಲ ಎಂದು ಜಿ.ಟಿ ದೇವೇಗೌಡ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಾಂಬೆ ಮಿಠಾಯಿಗೆ ನಿಷೇಧ: ಯಾಕೆ, ಏನು ಇಲ್ಲಿ ಓದಿ