Select Your Language

Notifications

webdunia
webdunia
webdunia
Sunday, 13 April 2025
webdunia

ಅವಧಿ ಮೀರಿದ ಮದ್ಯ ಸೇವಿಸಿದ ನಾಲ್ವರ ಸ್ಥಿತಿ ಗಂಭೀರ

ಮೈಸೂರು
ಮೈಸೂರು , ಗುರುವಾರ, 9 ಮೇ 2019 (12:54 IST)
ಮೈಸೂರು : ಅವಧಿ ಮೀರಿದ ಮದ್ಯ ಸೇವನೆ ಮಾಡಿ ನಾಲ್ವರು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.




ಕೆ.ಆರ್.ಪೇಟೆ ತಾಲೂಕಿನ ಕೃಷ್ಣಾಪುರದ ನಿವಾಸಿಗಳಾದ ಮಹದೇವ್, ಸುರೇಶ್, ತಮ್ಮಯ್ಯ ಮತ್ತು ಪರೇಗೌಡನಕೊಪ್ಪಲು ಯೋಗೇಶ್ ಮದ್ಯ ಸೇವಿಸಿದವರು. ಇವರು ಕೃಷ್ಣಾಪುರದ ಪೆಟ್ಟಿಗೆ ಅಂಗಡಿಯೊಂದರಲ್ಲಿ ಮದ್ಯವನ್ನು ಖರೀದಿಸಿ ಸೇವಿಸಿದ್ದರು. ಮದ್ಯ ಸೇವಿಸಿದ ಅರ್ಧ ಗಂಟೆಯಲ್ಲೇ ಹೊಟ್ಟೆ ನೋವು, ವಾಂತಿ, ಬೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.


ಈ ಘಟನೆ ಕುರಿತು ಕಿಕ್ಕೇರಿ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರ ಮಾಡಿ ತಪ್ಪಿಸಿಕೊಳ್ಳಲು ವಿಷ ಕುಡಿದು ನಾಟಕವಾಡಿದ ಕಾಮುಕ ಅರೆಸ್ಟ್