Publish Date: Sat, 22 Dec 2018 (06:36 IST)
Updated Date: Sat, 22 Dec 2018 (06:37 IST)
ಬೆಂಗಳೂರು : ಸಾಲಕ್ಕೆ ಸಿಗರೇಟ್ ಕೊಡುವುದಿಲ್ಲವೆಂದು ಹೇಳಿದ್ದಕ್ಕೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಕಿಡಿಗೇಡಿಗಳ ಗ್ಯಾಂಗ್ ವೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ನಗರ ಹೊರವಲಯದ ಕೆ.ಆರ್.ಪುರದಲ್ಲಿ ನಡೆದಿದೆ.
ಕುಂದಾಪುರ ಮೂಲದ ಅಭಿನವ್ ಹಲ್ಲೆಗೆ ಒಳಗಾದ ಯುವಕ. ಕೆ.ಆರ್.ಪುರದ ಸೆಂಟ್ ಅಂತೋನಿ ಸ್ಕೂಲ್ ರಸ್ತೆಯಲ್ಲಿರುವ ಬೇಕರಿಯಲ್ಲಿ ಅಭಿನವ್ ಕೆಲಸ ಮಾಡುತ್ತಿದ್ದ. ಅಲ್ಲಿಗೆ ಪುಂಡರ ಗ್ಯಾಂಗೊಂದು ಬಂದು ಸಾಲಕ್ಕೆ ಸಿಗರೇಟ್ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಅಭಿನವ್ ಒಪ್ಪದಿದ್ದಾಗ ಕೋಪಗೊಂಡ ಗ್ಯಾಂಗ್ ನವರು ಬೇಕರಿಗೆ ನುಗ್ಗಿ ಗ್ಲಾಸು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಪುಡಿಪುಡಿ ಮಾಡಿದ್ದಲ್ಲದೆ ಅಭಿನವ್ ಮೇಲೂ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಈ ಘಟನೆಯ ಬಗ್ಗೆ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಕೂಡ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಈ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.