ಬಸ್ ಪ್ರಯಾಣದ ವೇಳೆ ಪೋಷಕರಿಂದ ದೂರವಾಗಿದ್ದ ಮೂರು ವರ್ಷದ ಮಗುವನ್ನು ಸಾರ್ವಜನಿಕರ ಸಹಾಯದಿಂದ ಪೊಲೀಸರು ವಾಪಸ್ ಹೆತ್ತವರ ಮಡಿಲಿಗೆ ಸೇರಿಸಿದ ಘಟನೆ ನಡೆದಿದೆ. ಚಿಕ್ಕಮಗಳೂರಿನ ತಣಿಗೆ ಬೈಲು ನಿವಾಸಿಯಾದ ಮೋಹನ್ರವರ ತಂದೆ ಜೊತೆ ಶ್ರೇಯಸ ಖಾಸಗಿ ಬಸ್ ನಲ್ಲಿ ತರೀಕರೆಗೆ ಪ್ರಯಾಣಿಸುತ್ತಿದ್ದರು.
ಮಾರ್ಗಮಧ್ಯೆ ಅವರು ನಿದ್ರೆಗೆ ಜಾರಿದ್ದಾಗ ಲಿಂಗದಹಳ್ಳಿ ಬಸ್ ನಿಲ್ದಾಣದಲ್ಲಿ ಮಗು ಬಸ್ ನಿಂದ ಇಳಿದು ಪಕ್ಕದಲ್ಲೇ ಇದ್ದ ಮತ್ತೊಂದು ಬಸ್ ಹತ್ತಿದೆ. ದಿಕ್ಕುತೋಚದೆ ಅಳುತ್ತಾ ನಿಂತಿದ್ದ ಶ್ರೇಯಸ್ ನನ್ನು ಸಾರ್ವಜನಿಕರು ಸಂತೈಸಿ, ಮಗುವಿನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.
ಅಲ್ಲದೆ, ಮಗುವನ್ನು ತರೀಕೆರೆ ಪೊಲೀಸರಿಗೆ ಒಪ್ಪಿಸುತ್ತಾರೆ.ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಭಾವಚಿತ್ರ ಗಮನಿಸಿದ ಪೋಷಕರು ಪೊಲೀಸ್ ಠಾಣೆಗೆ ಬಂದು ಮಗುವನ್ನು ವಾಪಸ್ ಪಡೆದಿದ್ದಾರೆ.ಪೊಲೀಸರು ಹಾಗೂ ಸಾರ್ವಜನಿಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.