Select Your Language

Notifications

webdunia
webdunia
webdunia
webdunia

ರಾಜ್ಯದ ಸಾರಿಗೆ ಇಲಾಖೆಗೆ ಶಾಕಿಂಗ್ ನ್ಯೂಸ್ ಕೊಟ್ಟ ಪ್ರಯಾಣಿಕರು

ರಾಜ್ಯದ ಸಾರಿಗೆ ಇಲಾಖೆಗೆ ಶಾಕಿಂಗ್ ನ್ಯೂಸ್ ಕೊಟ್ಟ ಪ್ರಯಾಣಿಕರು
bangalore , ಭಾನುವಾರ, 24 ಡಿಸೆಂಬರ್ 2023 (14:21 IST)
ಕಳೆದ ಎರಡು ದಿನದಿಂದ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಲಕ್ಷ ಲಕ್ಷ ಇಳಿಕೆಯಾಗಿದೆ.  ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ  ಇನ್ನೂರರ ಗಾಡಿದಾಟ್ಟಿದೆ.ಕೋವಿಡ್ ಆತಂಕ ಹಿನ್ನೆಲೆ ಬಸ್ ನಲ್ಲಿ ಸಂಚಾರಕ್ಕೆ ಮಹಿಳೆಯರು ಹಿಂದೇಟು ಹಾಕಿದ್ದಾರೆ.

ರೂಪಾಂತರಿ ವೈರಸ್ JN.1 ಕಾಣಿಸುವ ಮುನ್ನವೇ ರಾಜ್ಯದ ಜನ ಎಚ್ಚರ ವಹಿಸಿದ್ದಾರೆ.ಬಸ್ ಗಳ ಸಂಚಾರ ಮಾಡಿದ್ರೆ ಎಲ್ಲಿ ಕೊರೊನಾ ಬರುತ್ತೋ ಅನ್ನೋ ಆತಂಕ ಜನರು ವ್ಯಕ್ತಪಡಿಸಿದ್ದಾರೆ ಹೀಗಾಗಿ ಕಳೆದ ಎರಡು ಮೂರು ದಿನಗಳಿಂದ ರಾಜ್ಯ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ.
 
KSRTC, BMTC ಸೇರಿ ಎಲ್ಲಾ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ.ಶಕ್ತಿ ಯೋಜನೆ ಬಳಿಕ ನಿತ್ಯವೂ ಲಕ್ಷ ಲಕ್ಷ ಪ್ರಯಾಣಿಕರ ಸಂಚಾರ ಆಗ್ತಿದ್ದಾರೆ.ಆದ್ರೆ ಕೊರೊನಾ ಹೊಡೆತ ಪ್ರಾರಂಭ ಆಗ್ತಿದ್ದಂತೆ ಸಂಚಾರ ಮಾಡೋದ್ರಲ್ಲಿ ಹಿಂದೆ ಜನ ಸರಿದಿದ್ದಾರೆ.ಎರಡು ಮೂರು‌ ದಿನಗಳಲ್ಲಿ ಲಕ್ಷ ಲಕ್ಷ ಪ್ರಯಾಣಿಕರನ್ನ ಸಾರಿಗೆ ನಿಗಮಗಳು ಕಳೆದುಕೊಂಡಿದೆ.ದಿನೆ ದಿನೆ ಬಸ್ ಗಳತ್ತ ಪ್ರಯಾಣದ ಉತ್ಸಾಹ ಜನ ಕಡಿಮೆ ಮಾಡ್ತಿದ್ದಾರೆ.ಎಲ್ಲಿ ಕೊರೊನಾ ಮತ್ತೆ ತೊಂದರೆ ಮಾಡುತ್ತೋ ಅನ್ನೋ ಭಯ ಈಗಲೇ ಜನರಿಗೆ ಶುರುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೈ ಯಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿರುವ ಶಿಕ್ಷಕರು