Publish Date: Wed, 15 Mar 2023 (12:48 IST)
Updated Date: Wed, 15 Mar 2023 (12:50 IST)
ಕಳೆದ ನಾಲ್ಕು ದಿನಗಳ ಹಿಂದೆ ಕೆಂಗೇರಿಯ ಅಪಾರ್ಟ್ಮೆಂಟ್ ಮೇಲಿಂದ ಬಿದ್ದು ಮೂರು ವರ್ಷದ ರಾಹುಲ್ ಎಂಬ ಮಗು ಗಾಯಗೊಂಡಿತ್ತು. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಗು ಸಾವನಪ್ಪಿದೆ.. ಮಾರ್ಚ್ 10ರಂದು ಕಲಬುರ್ಗಿಯ ಶಿವಪ್ಪ ಮತ್ತು ಅಂಬಿಕಾ ದಂಪತಿಯ ಮಗು ಮನೆಯ ಬಾಲ್ಕನಿಯಲ್ಲಿ ಆಟವಾಡುತ್ತಾ ಕಾಲು ಜಾರಿ ಕೆಳಗೆ ಬಿದ್ದಿತ್ತು.. ಮಗುವಿನ ತಾಯಿ ಇನ್ನೊಂದು ಮಗುವಿಗೆ ಊಟ ಮಾಡಿಸುತ್ತಿದ್ದು, ರಾಹುಲ್ ಕಡೆ ಗಮನನೀಡಿರಲಿಲ್ಲ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.