Select Your Language

Notifications

webdunia
webdunia
webdunia
webdunia

ಯಕ್ಷಗಾನ ಬಣ್ಣ ಕಳಚುವ ಮುನ್ನವೇ ಹೃದಯಾಘಾತದಿಂದ ನಿಧನರಾದ ಮಹಿಷಾಸುರ ಪಾತ್ರದಾರಿ

Yakshagana, Mandarti Mela, artist Eshwara Gowda

Sampriya

ಉಡುಪಿ , ಗುರುವಾರ, 20 ನವೆಂಬರ್ 2025 (14:55 IST)
Photo Credit X
ಉಡುಪಿ: ಮಂದಾರ್ತಿ ಮೇಳದ ಹಿರಿಯ ಕಲಾವಿದ ಈಶ್ವರ ಗೌಡ ಅವರು ಹೃದಯಾಘಾತದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಮಹಿಷಾಸುರ ಪಾತ್ರದ ಪ್ರದರ್ಶನದ ನಂತರ ಹೃದಯಾಘಾತದಿಂದ ನಿಧನರಾದರು. 

ಮಹಿಷಾಸುರ ಪಾತ್ರದಲ್ಲಿ ಅದ್ಭುತ ನಟನೆ ನೀಡಿ, ಪ್ರಸಂಗ ಮುಗಿಸಿ ವೇಷ ಕಳಚುತ್ತಿದ್ದಂತೆಯೇ ಈಶ್ವರ ಗೌಡ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದ್ರೂ ಆ ವೇಳೆಗೆ ದಾರಿಯಲ್ಲೇ ಅವರು ನಿಧನರಾಗಿದ್ದಾರೆ.

ವಿಶೇಷವೆಂದರೆ, ಅದೇ ಮಂದಾರ್ತಿ ಮೇಳದಲ್ಲಿ ಈಶ್ವರ ಗೌಡ ಅವರ ತಂದೆ ಕೂಡ ಹಿರಿಯ ವೇಷಧಾರಿಯಾಗಿದ್ದು, ಪ್ರತಿ ಪ್ರದರ್ಶನದಲ್ಲೂ ಚೌಕಿಯಲ್ಲಿ ತಂದೆಯ ಆಶೀರ್ವಾದ ಪಡೆದು ನಂತರವೇ ಮಗ ಪಾತ್ರನಿರ್ವಹಿಸುತ್ತಿದ್ದರಂತೆ. ಬುಧವಾರ ಕೂಡ ಕೊನೆಯ ಆಶೀರ್ವಾದವೆಂಬಂತೆ ತಂದೆಯ ಕಾಲು ಮುಟ್ಟೀ ನಮಸ್ಕರಿಸಿ ಪಾತ್ರ ನಿರ್ವಹಿಸಿದ್ದರು. 

ಪಾತ್ರ ಮುಗಿಸಿ ತಂದೆಯ ಬಳಿ ಮರಳಿ ಬರುವ ಮೊದಲೇ ಜೀವ ಬಿಟ್ಟಿದ್ದಾರೆ. ಈಶ್ವರ ಗೌಡರ ಅಕಾಲಿಕ ನಿಧನಕ್ಕೆ ಯಕ್ಷಗಾನದ ಪ್ರೇಮಿಗಳು, ಮಂದಾರ್ತಿ ಮೇಳದ ಕಲಾವಿದರು ಕಂಬನಿ ಮಿಡಿದಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ: ಇದು ಸಾಧನೆಯಲ್ಲ ಕನ್ನಡಿಗರ ದುರಂತ ಎಂದ ಅಶೋಕ್