Select Your Language

Notifications

webdunia
webdunia
webdunia
webdunia

ಕೃಷಿ ಉತ್ಪನ್ನ ಖರೀದಿ: ರೈತರಿಗೆ ಸಮರ್ಪಕ ಮಾಹಿತಿ ಕೊಡಿ ಎಂದ ಆಯೋಗದ ಅಧ್ಯಕ್ಷ

ಕೃಷಿ ಉತ್ಪನ್ನ ಖರೀದಿ:  ರೈತರಿಗೆ ಸಮರ್ಪಕ ಮಾಹಿತಿ ಕೊಡಿ ಎಂದ ಆಯೋಗದ ಅಧ್ಯಕ್ಷ
ಕಲಬುರಗಿ , ಭಾನುವಾರ, 30 ಸೆಪ್ಟಂಬರ್ 2018 (19:26 IST)
ರೈತ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದಿದ್ದಾಗ ಕೃಷಿ ಉತ್ಪನ್ನಗಳ ಧಾರಣೆಯ ಸ್ಥಿರಿಕರಣಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಸರ್ಕಾರ ಕೃಷಿ ಉತ್ಪನ್ನದ ಮಾರ್ಕೆಟ್ ಸಪ್ರ್ಲಸ್‍ನ ಶೇ.25ರಷ್ಟು ಪ್ರಮಾಣ ಮಾತ್ರ ಬೆಂಬಲ ಬೆಲೆಯಲ್ಲಿ ಖರೀದಿಸಲು ಸಾಧ್ಯವಿದೆ. ರೈತರು ಬೆಳೆದ ಒಟ್ಟಾರೆ ಪ್ರಮಾಣವಲ್ಲ ಎಂಬ ಸ್ಪಷ್ಠನೆಯನ್ನು ರೈತರಿಗೆ ಸಮರ್ಪಕವಾದ ಮಾಹಿತಿ ಕೊಡಿ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ ಕಮ್ಮರಡಿ ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು.

ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿ, ಕೃಷಿ ಸಂಬಂಧಿತ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ 2018-19ನೇ ಸಾಲಿನ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಉತ್ಪಾದನಾ ಪರಿಸ್ಥಿತಿ ಹಾಗೂ ಧಾರಣೆ ಮತ್ತು ಖರೀದಿ ಸಿದ್ದತೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಹೆಸರು ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಖರೀದಿ ಪ್ರಕ್ರಿಯೆ, ಅವಧಿ ಮತ್ತು ಖರೀದಿ ಕೇಂದ್ರಗಳ ಬಗ್ಗೆ ಸಂಪೂರ್ಣ ಮಾಹಿತಿ ರೈತರಿಗೆ ವಿವಿಧ ಪ್ರಚಾರ ಮಾಧ್ಯಮ ಮುಖೇನ ತಿಳಿಸಿ. ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ಬರುವ ರೈತರ ಪಹಾಣಿ ದಾಖಲೆ ಪರಿಶೀಲನೆ, ನೊಂದಣಿ, ಬೆಳೆಯಲಾದ ಒಟ್ಟು ಉತ್ಪನ್ನ, ಮಾರಾಟದ ಉತ್ಪನ್ನ ಹಾಗೂ ಮನೆಯಲ್ಲಿ ಶೇಖರಣೆಯ ಪ್ರಮಾಣ ಹೀಗೆ ಇತ್ಯಾದಿ ಮಾಹಿತಿಯನ್ನು ಎ.ಪಿ.ಎಂ.ಸಿ. ಅಧಿಕಾರಿಗಳು ಸಮಗ್ರ ಮಾಹಿತಿ ಕಲೆ ಹಾಕಬೇಕು. ಖರೀದಿ ಪ್ರಕ್ರಿಯೆ ಸುಗಮವಾಗಿ ಸಾಗಲು ಎ.ಪಿ.ಎಂ.ಸಿ., ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಸೇರಿದಂತೆ ಕೃಷಿ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚುರುಕಾಗಿ ಕಾರ್ಯನಿರ್ವಹಿಸಬೇಕು ಹಾಗೂ ಯಾವುದೇ ಕಾರಣಕ್ಕು ದಲ್ಲಾಳಿಗಳಿಂದ ರೈತರು ಮೋಸ ಹೋಗದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಸೌದಿಯಿಂದ ಬಂದ ಕಾಲ್ ಆ ಕುಟುಂಬದವರ ಬಾಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ…!