Select Your Language

Notifications

webdunia
webdunia
webdunia
webdunia

ಒಂದೇ ಕುಟುಂಬದ ಐವರ ಅನುಮಾನಾಸ್ಪದ ಸಾವು ಪ್ರಕರಣ ದಿನಕ್ಕೊಂದು ತಿರುವು

ಒಂದೇ ಕುಟುಂಬದ ಐವರ ಅನುಮಾನಾಸ್ಪದ ಸಾವು ಪ್ರಕರಣ ದಿನಕ್ಕೊಂದು ತಿರುವು
bangalore , ಸೋಮವಾರ, 20 ಸೆಪ್ಟಂಬರ್ 2021 (21:48 IST)
ಬೆಂಗಳೂರು: ಒಂದೇ ಕುಟುಂಬದ ಐವರ ಅನುಮಾನಾಸ್ಪದ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ಮೂರು ಡೆತ್ ನೋಟ್ ಪತ್ತೆಯಾಗಿದ್ದು,‌ ಈ ಸಂಬಂಧ ನೀಡಿದ್ದ ನೊಟೀಸ್​ಗೆ ಪೊಲೀಸರ ಮುಂದೆ ಮನೆಯ ಯಜಮಾನ ಶಂಕರ್ ವಿಚಾರಣೆಗೆ ಹಾಜರಾಗಿದ್ದರು‌.
ಆತ್ಮಹತ್ಯೆ ಮಾಡಿಕೊಂಡಿದ್ದ ಸಿಂಚನಾ, ಸಿಂಧೂರಾಣಿ ಹಾಗೂ ಮಧುಸಾಗರ್ ಸಾವಿನ ಮುನ್ನವೇ ಬರೆದಿದ್ದ ಡೆತ್ ನೋಟ್​​​ನಲ್ಲಿ ಶಂಕರ್ ವಿರುದ್ಧ ಆಪಾದನೆ ಮಾಡಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಶಂಕರ್ ವಿರುದ್ಧ ಸಿಕ್ಕಿರುವ ಡೆತ್ ನೋಟ್ ಬರೆದಿರೋದು ಶಂಕರ್ ಮಕ್ಕಳೇನಾ ಎಂಬುದರ ಬಗ್ಗೆ ನಿರ್ಧಾರವಾಗಬೇಕಿದೆ.
ಘಟನಾ ಸ್ಥಳದಲ್ಲಿ ದೊರೆತಿರುವ ಸಾವಿನ ಪತ್ರ ಬಗ್ಗೆ ಹ್ಯಾಂಡ್ ರೈಟಿಂಗ್ ಎಕ್ಸ್​​​ಪರ್ಟ್​​​ಗಳಿಗೆ ಡೆತ್ ನೋಟ್ ರವಾನೆ ಮಾಡಲಿದ್ದು, ಬರೆದಿರುವ ಡೆತ್ ನೋಟ್ ಅವರದ್ದೇನಾ ಎಂದು ಪರಿಶೀಲನೆ ನಡೆಸಲಾಗುತ್ತದೆ. ಸಾವನ್ನಪ್ಪಿ ನಾಲ್ಕೈದು ದಿನ ಆಗಿರೋದರಿಂದ ಕೈ ಬರಹ ಚೆಕ್ ಮಾಡೋದು ಅತ್ಯಾವಶ್ಯಕವಾಗಿರಲಿದೆ. ಹಳೆ ಕೈ ಬರಹದ ಜೊತೆಗೆ ಡೆತ್ ನೋಟ್ ಹ್ಯಾಂಡ್ ರೈಟಿಂಗ್ ಮ್ಯಾಚ್ ಮಾಡಿ ಪರಿಶೀಲನೆ ನಡೆಸಲಾಗುತ್ತದೆ. ಕೈ ಬರಹ, ಸಹಿ ಎಲ್ಲವೂ ಕೂಡ ಮ್ಯಾಚ್ ಆಗಬೇಕಿದೆ. ಆಗಷ್ಟೇ ಡೆತ್ ನೋಟ್​​ಗೆ ಮತ್ತಷ್ಟು ಮಾನ್ಯತೆ ಸಿಗಲಿದೆ.
 
ಡೆತ್​​​​ನೋಟ್​​ನಲ್ಲಿ ಏನೇನಿದೆ?: ಡೆತ್ ನೋಟ್​ನಲ್ಲಿ ಮೂವರು ಮಕ್ಕಳೂ ತಂದೆ ಮೇಲೆ ನೇರ ಆರೋಪಿಸಿದ್ದು, ಪುತ್ರ ಮಧು ಸಾಗರ್ ನಮ್ಮ ತಂದೆ ಸರಿ ಇಲ್ಲ ಎಂದು ಡೆತ್ ನೋಟ್​​ನಲ್ಲಿ ಉಲ್ಲೇಖಿಸಿದ್ದಾನೆ. ತಂದೆಗೆ ನಾಲ್ಕರಿಂದ ಐದು ಜನರ ಜೊತೆಗೆ ಅನೈತಿಕ ಸಂಬಂಧವಿತ್ತು. ಮನೆಯಿಂದ ಹೊರಹೋದರೆ ಮೂರ್ನಾಲ್ಕು ದಿನ ಮನೆಗೆ ಬರುತ್ತಿರಲಿಲ್ಲ. ಇಬ್ಬರು ಪುತ್ರಿಯರಿಂದಲೂ ತಂದೆ ಮೇಲೆ ಸಾಲು ಸಾಲು ಆರೋಪಗಳಿದ್ದು, ತಂದೆ ಮಾತ್ರವಲ್ಲ ಅತ್ತೆ, ಮಾವ ಮತ್ತು ಪತಿ ಮೇಲೂ ಆರೋಪ ಮಾಡಿದ್ದಾರೆ. ಗಂಡನ ಮನೆಯಲ್ಲೂ ಕೂಡ ನೆಮ್ಮದಿಯಿಂದ ಇರಲು ಆಗುತ್ತಿರಲಿಲ್ಲ. ನಮಗೆ ಪೂರ್ಣ ಸ್ವತಂತ್ರ ಕೂಡ ಇರಲಿಲ್ಲ. ಅವರ ಜೊತೆ ಬದುಕಲು ಹಿಂಸೆ ಆಗುತಿತ್ತು. ಹಾಗಾಗಿ ಅಮ್ಮನ ಮನೆಗೆ ಬಂದಿದ್ದೆವು. ಆದರೆ, ಮನೆಯಲ್ಲಿಯೂ ತಂದೆಯಿಂದ ನೆಮ್ಮದಿ ಸಿಗಲಿಲ್ಲ. ಗಂಡನ ಮನೆಗೆ ಹೋದರು ನೆಮ್ಮದಿ ಇರಲಿಲ್ಲ, ತಂದೆಯಿಂದಲೂ ಕಿರಿಕಿರಿ ಯಾಗಿದ್ದರಿಂದ ಆತ್ಮಹತ್ಯೆ ನಿರ್ಧಾರಕ್ಕೆ ಬಂದೆವು ಎಂದು ಡೆತ್ ನೋಟ್​​ನಲ್ಲಿ ಪುತ್ರಿಯರು ಉಲ್ಲೇಖಿಸಿದ್ದಾರೆ.
 
ಲ್ಯಾಪ್​​​ಟಾಪ್​​ನಲ್ಲಿರೋದು ಏನು?:
ಯುವತಿಯರ ಹೆಸರು, ನಂಬರ್, ಫೋಟೋ ಎಲ್ಲವೂ ಲ್ಯಾಪ್ ಟಾಪ್​​ನಲ್ಲಿದ್ದು, ಮಹಜರು ವೇಳೆ 3 ಲ್ಯಾಪ್ ಟಾಪ್​​​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು,‌ ಜೊತೆಗೆ ಒಂದು ಪೆನ್ ಡ್ರೈವ್ ಕೂಡ ಮನೆಯಲ್ಲಿ ಜಪ್ತಿ ಮಾಡಿಕೊಂಡಿದ್ದರು. ಜಪ್ತಿ ಮಾಡಿಕೊಂಡಿದ್ದ ಲ್ಯಾಪ್ ಟಾಪ್ ಹಾಗೂ ಪೆನ್ ಡ್ರೈವ್ ಬಗ್ಗೆ‌ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಸಾಕ್ಷ್ಯ ಸಿಕ್ಕ ಬಳಿಕವೂ ಪೊಲೀಸರಿಂದ ಡೆತ್ ನೋಟ್​​ನಲ್ಲಿ ಹೇಳಿರುವುದು ಸತ್ಯನಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ.
sucide

Share this Story:

Follow Webdunia kannada

ಮುಂದಿನ ಸುದ್ದಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಗರದ ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ